Mysore
14
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಪೊನ್ನಂಪೇಟೆ: ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

ಕೊಡಗು: ಪೊನ್ನಂಪೇಟೆ ತಾಲ್ಲೂಕಿನ ಐಸುಡ್ಲೂರು ಗ್ರಾಮದ ಮೇಲತಂಡ ಸಜನ್ ಪೂವಯ್ಯ ಅವರ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಬೃಹತ್‌ ಗಾತ್ರದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆಯ ಉರಗ ರಕ್ಷಕ ನವೀನ್ ರಾಕಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ನವೀನ್ ರಾಕಿ ಅವರು ಕಳೆದ 16 ವರ್ಷದಿಂದ ಇಲ್ಲಿಯವರೆಗು ಒಟ್ಟು 27 ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. 8 ಸಾವಿರಕ್ಕೂ ಹೆಚ್ಚಿನ ಭಿನ್ನವಾದ ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅದರದರ ಆಸ್ತಾನಕ್ಕೆ ಬಿಟ್ಟಿದ್ದಾರೆ. ನಮ್ಮ ಕೊಡಗಿನಲ್ಲೇ 48 ವಿಧದ ಹಾವುಗಳು ಕಾಣ ಸಿಗುತ್ತದೆ. ಕೇವಲ 4 ವಿಧದ ಹಾವುಗಳು ಮಾತ್ರ ಅತ್ಯಂತ ಅಪಾಯಕಾರಿಯಾಗಿರುತ್ತದೆ ಎಂದು ನವೀನ್ ರಾಕಿ ತಿಳಿಸಿದ್ದಾರೆ.

 

Tags:
error: Content is protected !!