ಕೊಡಗು : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಾಳುಗೋಡುವಿನಲ್ಲಿ ಗುಂಡೇಟಿಗೆ ಕಾಡಾನೆಯೊಂದು ಬಲಿಯಾಗಿದೆ.
ನೆನ್ನೆ ರಾತ್ರಿ ಕಿಡಿಗೇಡಿಗಳ ಅಟ್ಟಹಾಸಕ್ಕೆ ಸುಮಾರು 18 ವರ್ಷದ ಹೆಣ್ಣು ಆನೆ ಬಲಿಯಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಕೊಡಗು ಜಿಲ್ಲಾ DFO ಶಿವರಾಮ್ ಬಾಬು,ವಲಯ ಅರಣ್ಯಾಧಿಕಾರಿ ಶಿವರಾಮ್ ಕೆ.ವಿ ಹಾಗೂ ಉಪವಲಯ ಅರಣ್ಯಾಧಿಕಾರಿಗಳಾದ ಅನಿಲ್ ಡಿಸ್ಸೋಜ, ದೇವಯ್ಯ,ರಂಜನ್ ಹಾಗೂ RRT ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





