ಮಡಿಕೇರಿ : ಮಂಜಿನ ನಗರಿಯಲ್ಲಿ ಐತಿಹಾಸಿಕ ದಸರಾ ಸಂಭ್ರಮ ಕಳೆಗಟ್ಟಿದ್ದು, ವೈವಿದ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಶನಿವಾರ ಯುವ ದಸರಾ ಅಂಗವಾಗಿ ನಡೆದ ಯುವ ದಸರಾ ಯುವಸಮೂಹದ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಮಡಿಕೇರಿಯಲ್ಲಿ ಬೆಳಿಗ್ಗೆಯಿಂದಲೇ ಯುವ ದಸರಾ ಕಾರ್ಯಕ್ರಮಗಳು ಆರಂಭಗೊಂಡವು. ಮುಂಜಾನೆ ಸೈಕಲ್ ಜಾಥದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ಬಳಿಕ ಗಾಂಧಿ ಮೈದಾನದಲ್ಲಿ ನಡೆದ ಬೈಕ್ ಸ್ಟಂಟ್ ಹಾಗೂ ಸೂಪರ್ ಬೈಕ್‌ಗಳ ರ‍್ಯಾಲಿ ನೋಡುಗರ ಮೈನವಿರೇಳಿಸಿತು. ಯುವಕರು ವಿವಿಧ ಕಸರತ್ತಿನ ಮೂಲಕ ಮಿಂಚಿನ ವೇಗದಲ್ಲಿ ಬೈಕ್ ಚಲಾಯಿಸಿ ಎದೆ ಝಲ್ ಎನ್ನುವಂತೆ ಮಾಡಿದರು.
ಫ್ರೀಸ್ಟೈಲ್, ಸ್ಟಾಪಿ, ವೀಲಿಂಗ್, ಡ್ರಿಫ್ಟ್ ಸೇರಿದಂತೆ ನಾನಾ ರೀತಿಯ ಸ್ಟಂಟ್‌ಗಳನ್ನು ಮಾಡುವ ಮೂಲಕ ಯುವಕರು ಪ್ರೇಕ್ಷಕರ ಕಣ್ಮನ ಸೆಳೆದರು. ಇದರ ಜೋತೆಗೆ ಸೂಪರ್ ಬೈಕ್‌ಗಳು ಕೂಡ ಬೂಮ್ ಬೂಮ್ ಸೌಂಡ್ ಮಾಡುತ್ತಾ ಮಡಿಕೇರಿ ನಗರದಲ್ಲಿ ಒಂದು ರೌಂಡ್ಸ್ ಹಾಕಿದವು. ಸೂಪರ್ ಬೈಕ್‌ಗಳಾದ ಆರ್‌ಓನ್ 5, ವಾಸಕಿ ನಿಂಜ, ಬೆನಿಲಿ 600, ಡುಕಾಟಿ ಹೈಪರ್, ಆರ್‌ಎಕ್ಸ್, ಜಾವ ಬೈಕ್ ಸೇರಿದಂತೆ ಸೂಪರ್ ಬೈಕ್ ಗಳು ಮಡಿಕೇರಿಗರು ಕಣ್ಣು ಬಿಟ್ಟು ನೋಡುವಂತೆ ಮಾಡಿತ್ತು.