ಮಡಿಕೇರಿ: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್‌ನ್ನು ಎಸ್‌ಐಟಿ ತನಿಖೆಗೆ ಕೊಟ್ಟರೆ ಪ್ರಜ್ವಲ್ ರೇವಣ್ಣನಂತೆ ಪ್ರತಾಪ್ ಸಿಂಹ ಕೂಡ ಜೈಲುಶಿಕ್ಷೆ ಅನುಭವಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 2023ರಲ್ಲಿ ಸಂಸತ್ ಭದ್ರತಾ ಉಲ್ಲಂಘನೆ ಬಳಿಕ ಪೊಲೀಸರು ಪ್ರತಾಪ್ ಸಿಂಹ ಮೊಬೈಲ್ ವಶಪಡಿಸಿಕೊಂಡಿದ್ದರು. ಈ ವೇಳೆ ಪ್ರತಾಪ್ ಸಿಂಹ ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ವಿಡಿಯೋಗಳು ಪತ್ತೆಯಾಗಿವೆ. ಇದನ್ನು ನೋಡಿದ ಅಮಿತ್ ಶಾ ಅವರೇ ದಿಗ್ಬ್ರಮೆಯಾಗಿದ್ದರು. ಈ ಬಗ್ಗೆ ನನ್ನ ಬಳಿ ಆಧಾರಗಳಿವೆ ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಇದೇ ಕಾರಣಕ್ಕಾಗಿಯೇ ಪ್ರತಾಪ್ ಸಿಂಹ ಅವರಿಗೆ ಲೋಕಸಭಾ ಟಿಕೆಟ್ ನೀಡಲು ನಿರಾಕರಿಸಿದರು. ಪ್ರತಾಪ್ ಸಿಂಹ ಮೊಬೈಲ್‌ನ್ನು ಎಸ್‌ಐಟಿ ತನಿಖೆ ನಡೆಸಿದ್ರೆ, ಜೈಲುಶಿಕ್ಷೆ ಆಗುವುದು ಪಕ್ಕಾ ಎಂದು ವಾಗ್ದಾಳಿ ನಡೆಸಿದರು.





