ಸೋಮವಾರಪೇಟೆ : ಬೃಹತ್ ಆಕಾರದ ಬಂಡೆಯೊಂದು ರಸ್ತೆ ಮೇಲೆ ಉರುಳಿ ಸಮೀಪದ ಕೂತಿ-ಶಾಂತಳ್ಳಿಯ ಸಂಪರ್ಕ ರಸ್ತೆಯು ಕಡಿತಗೊಂಡಿದೆ.
ಕೂತಿಯಿಂದ ನಗರಳ್ಳಿ-ಬಸವನಕಟ್ಟೆ ಮಾರ್ಗವಾಗಿ ಶಾಂತಳ್ಳಿ ಹಾಗೂ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಗುರುವಾರ ತಡರಾತ್ರಿ ಪಕ್ಕದ ತೋಟದಿಂದ ಬಂಡೆ ಉರುಳಿದ್ದು, ಸದ್ಯ ಯಾವುದೇ ಅನಾಹುತ ನಡೆದಿಲ್ಲ. ಪರಿಣಾಮ ಶುಕ್ರವಾರ ದಿನವಿಡೀ ರಸ್ತೆ ಬಂದ್ ಆಗಿತ್ತು. ನಂತರ ಯಂತ್ರಗಳ ಮೂಲಕ ತೆರವು ಕಾರ್ಯ ಮುಂದುವರಿದಿದ್ದು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





