ಕೊಡಗು: ಕ್ಷುಲ್ಲಕ ಕಾರಣಕ್ಕೆ ಅತ್ತೆ ಹಾಗೂ ಸೊಸೆ ನಡುವೆ ಗಲಾಟೆ ಉಂಟಾಗಿದ್ದು, ಅದು ಸಾವಿನೊಂದಿಗೆ ಅಂತ್ಯ ಕಂಡಿದೆ. ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ನಿವಾಸಿ ಪೂವಮ್ಮ (73) ಮೃತ ವೃದ್ಧೆಯಾಗಿದ್ದಾರೆ.
ತಮ್ಮ ಸೊಸೆ ಬಿಂದು (26) ವೃದ್ದೆಯನ್ನು ಕೊಂದ ಸೊಸೆಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ತನ್ನ ಅತ್ತೆಯನ್ನೇ ಸೊಸೆ ಕೊಂದು ನಂತರ ಅದನ್ನು ಸಹಜ ಸಾವು ಎಂದು ಬಿಂಬಿಸುವ ಯತ್ನ ಮಾಡಿದ್ದರು. ಇದನ್ನು ಮನಗಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಬಿಂದು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.





