Mysore
20
broken clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಮಡಿಕೇರಿ ದಸರಾಗೆ ಕ್ಷಣಗಣನೆ: ದಶಮಂಟಪಗಳ ಮೆರವಣಿಗೆಗೆ ಸಜ್ಜು

ಮಡಿಕೇರಿ: ಇಂದು ಸಂಜೆ ಮೈಸೂರು ದಸರಾಗೆ ತೆರೆ ಬೀಳುತ್ತಿದ್ದಂತೆ ಇತ್ತ ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆ ಶುರುವಾಗಲಿದೆ.

ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ  10 ಪ್ರಮುಖ ದೇವಾಲಯಗಳಿಂದ ಸಿದ್ಧಗೊಳ್ಳುತ್ತಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಮಂದಿ ಮಡಿಕೇರಿಗೆ ಆಗಮಿಸಿದ್ದಾರೆ.

ಇಂದು ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ಮುಂಜಾನೆವರೆಗೂ ಸಂಚರಿಸಿ ಎಲ್ಲರಿಗೂ ಪ್ರದರ್ಶನ ನೀಡಲಿವೆ.

ಪೌರಾಣಿಕ ಹಿನ್ನೆಲೆಯ ಕಥೆಯನ್ನು ಪ್ರದರ್ಶಿಸಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿಗಳು ಸೇರಿದಂತೆ 10 ದೇವಾಲಯಗಳು ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲಿವೆ.

ದಶಮಂಟಪಗಳ ಪ್ರದರ್ಶನ ನೋಡಲೆಂದೇ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಜನರು ಮಡಿಕೇರಿಗೆ ಆಗಮಿಸಿರುವುದು ವಿಶೇಷವೆನಿಸಿದೆ.

 

Tags:
error: Content is protected !!