ಕೊಡಗಿನಲ್ಲಿ ಎರಡಂತಸ್ಥಿನ ಕಟ್ಟಡ ದಿಢೀರ್‌ ಕುಸಿತ: ಪ್ರಾಣಾಪಾಯದಿಂದ ನಾಲ್ವರು ಪಾರು

ಕೊಡಗು: ಎರಡಂತಸ್ಥಿನ ಕಟ್ಟಡವೊಂದು ದಿಢೀರ್‌ ಕುಸಿದ ಘಟನೆ ಜಿಲ್ಲೆಯ ಪೊನ್ನಂಪೇಟೆಯ ಗೋಣಿಕೊಪ್ಪಲು ಪಟ್ಟಣದಲ್ಲಿ ಗುರುವಾರ (ಜೂನ್‌.೨೦) ಮದ್ಯಾಹ್ನ ನಡೆದಿದೆ. ಆ ಕಟ್ಟಡದಲ್ಲಿದ್ದ ನಾಲ್ವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಹೋಟೆಲ್ ಕಟ್ಟಡವು ಇಂದು ಮಧ್ಯಾಹ್ನ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದಿದೆ. ಹೋಟೆಲ್ ಒಳಗೆ ಕಾರ್ಮಿಕರು, ಮತ್ತು ಗ್ರಾಹಕರು ಸಿಲುಕಿಕೊಂಡಿದ್ದರು. ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್ ಮತ್ತೊಂದರಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು. ಇದೀಗ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಂಡಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ತೆರವು ಕಾರ್ಯಚರಣೆ ನಡೆಸಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

Tags: