Mysore
27
scattered clouds
Light
Dark

ಬೈಕ್ ಕಳ್ಳತನ : ಆರೋಪಿ ಬಂಧನ

ಮಡಿಕೇರಿ: ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಲ್ಲಿ ಇತ್ತೀಚಿಗೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಂಬಿಬಾಣೆಯ ಚಿರಾಗ್ ಎಂಬುವರ ಬೈಕ್ ಕಳ್ಳತನವಾಗಿತ್ತು. ಯುವಕನೊಬ್ಬ ಅದನ್ನು ಕದ್ದು ತಳ್ಳಿಕೊಂಡು ಹೋಗುತ್ತಿದ್ದುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಕಾರ್ಯಾಚರಣೆಗಿಳಿದಾಗ ಸೋಮವಾರಪೇಟೆ ದೊಡ್ಡಮಳ್ತೆ ನಿವಾಸಿ ಚಂದನ್ (29) ಎಂಬಾತ ಬೈಕ್ ಅನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಸುಂಟಿಕೊಪ್ಪ ಪಿಎಸ್ ಐ ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಭಾರತಿ ಅವರ ನೇತೃತ್ವದ ತಂಡ ಹೆಚ್.ಡಿ.ಕೋಟೆಯ ಸರಗೂರುವಿನಲ್ಲಿ ಆರೋಪಿ ಚಂದನ್ ನನ್ನು ಬಂಧಿಸಿ ಕಳ್ಳತನವಾಗಿದ್ದ ಬೈಕ್ ಅನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.