ಮಡಿಕೇರಿ : ಕೊಡಗಿನಲ್ಲಿ ವರುಣನ ಆರ್ಭಟ ಜೋರಾಗಿರುವ ಹಿನ್ನೆಲೆ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ. ರಸ್ತೆ ಕುಸಿತ ತಡೆಯುವ ದೃಷ್ಠಿಯಿಂದ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಮರಳು ಸಾಗಾಣಿಕೆ, ಮರದ ದಿಮ್ಮಿ ಸಾಗಾಣಿಕೆಯ ಲಾರಿಗಳಿಗೆ ನಿಷೇಧಿಸಲಾಗಿದೆ. ೧೮೫೦೦ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಡಿಸಿ ನಿಷೇಧ ಹೇರಿದ್ದಾರೆ.
ಈಗಾಗಲೇ ಜಿಲ್ಲೆಯ ಗಡಿಗಳಲ್ಲಿ ೨೪ ಗಂಟೆಯೂ ನಿಗಾ ಇಡಲಾಗಿದ್ದು, ಸಾರಿಗೆ ಪೊಲೀಸ್ ಸಿಬ್ಬಂದಿ ಹೆದ್ದಾರಿಗಳಲ್ಲಿ ಪೆಟ್ರೋಲಿಂಗ್ ನಡೆಸಲಿದ್ದಾರೆ. ಹಾಲು, ಇಂಧನ ಅನಿಲ ಪೂರೈಕೆ ವಾಹನಗಳಿಗೆ ರಿಯಾಯಿತಿ ನೀಡಲಾಗಿದೆ. ಮಳೆಗಾಲ ಮುಗಿಯುವ ತನಕ ಜಿಲ್ಲೆಯಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧವಿರಲಿದ್ದು, ಸದ್ಯ ಜುಲೈ ೧ ರಿಂದ ೩೦ ರವರೆಗೆ ಆದೇಶ ಹೊರಡಿಸಲಾಗಿದೆ