Mysore
25
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಖಾಸಗಿ ದರ್ಬಾರಿಗೂ ಮುನ್ನ ಕುಟುಂಬದ ಜೊತೆ ಕಾಣಿಸಿಕೊಂಡ ರಾಜವಂಶಸ್ಥರಾದ ಯದುವೀರ್‌  

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಮೊದಲ ದಿನವಾದ ಇಂದು ಸಾಂಸ್ಕೃತಿಕ ನಗರಿಯಲ್ಲಿ ಹಲವಾರು ಕಾರ್ಯಕ್ರಮಗಳು ಜನತೆಗೆ ಹಬ್ಬದ ಕಳೆಯನ್ನು ಮತ್ತಷ್ಟು ತಂದುಕೊಟ್ಟವು.
ಮೈಸೂರಿನ ರಾಜ ದುವೀರ್ ವೇದ- ಘೋಷಗಳೊಂದಿಗೆ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವ ಮೂಲಕ ಖಾಸಗಿ ದರ್ಬಾರು ನಡೆಸಿದರು.
ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್, ಪುತ್ರ ಆದ್ಯವೀರ್ ಒಡೆಯರ್ ಇವರುಗಳೊಟ್ಟಿಗೆ ಖಾಸಗಿ ದರ್ಬಾರಿಗೂ ಮೊದಲು ಯದುವೀರ್‌ ಕಾಣಿಸಿಕೊಂಡರು.

ಖಾಸಗಿ ದರ್ಬಾರಿನ ವೇಳೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಪರಕಾಲ ಮಠ, ಶ್ರೀರಂಗಪಟ್ಟಣದ ಶ್ರೀರಂಗನಾಥೇಶ್ವರ ದೇವಾಲಯ, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಾಲಯ, ಅರಮನೆಯ ಆವರಣದಲ್ಲಿರುವ ಎಲ್ಲ ದೇವಾಲಯಗಳೂ ಸೇರಿದಂತೆ ಸುಮಾರು ೨೩ ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯದುವೀರ್ ಅವರಿಗೆ ನೀಡಿ ಶುಭ ಕೋರಲಾಯಿತು.
ಬಳಿಕ ಪೊಲೀಸ್ ಬ್ಯಾಂಡ್ ವಾದಕರು ನುಡಿಸಿದ ಮೈಸೂರು ಸಂಸ್ಥಾನದ ಗೀತೆಯಾದ ‘ಕಾಯೌ ಶ್ರೀ ಗೌರಿ’ ಗೀತೆಗೆ ವಂದನೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ಗೌರವ ಸಲ್ಲಿಸಿದರು,

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!