ಕೇರಳ ಲಾಟರಿ ಮಾರಾಟ ; ವ್ಯಕ್ತಿ ಬಂಧನ

ಯಳಂದೂರು: ತಾಲೂಕಿನ ಯರಗಂಬಳ್ಳಿಯಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿದ್ದಾರ್ಥ @ ಸಿದ್ದೇಶ್ ಎಂಬಾತನನ್ನು ಬಂಧಿಸಿ ಆತನ ಬಳಿಯಲ್ಲಿದ್ದ 4280 ರೂ. ಮೌಲ್ಯದ 107 ಕೇರಳ ರಾಜ್ಯದ ಲಾಟರಿಗಳನ್ನು ಹಾಗೂ ಮಾರಾಟ ಮಾಡಿದ್ದ ಹಣ ರೂ.4,020 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಲೂಕಿನ ಯರಗಂಬಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ಅಕ್ರಮವಾಗಿ ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅಧರಿಸಿ ಸಿಪಿಐ ಶಿವ ಮಾದಯ್ಯನವರ ನೇತೃತ್ವದಲ್ಲಿ ಪಿ ಎಸ್ ಐ ಕರಿಬಸಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.

ಈ ಸಂಬಂಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ