Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೊಳಗಿದ ಕನ್ನಡ ಗೀತೆಗಳ ಗಾಯನ

ಯಳಂದೂರು: ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮದ ಹಿನ್ನೆಲೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಜೊತೆಗೂಡಿ ಸಮೂಹ ಗೀತ ಗಾಯನ ನಡೆಯಿತು.

ಮೊದಲಿಗೆ ವೇದಿಕೆಯ ಗಣ್ಯರನ್ನು ಸ್ವಾಗತಿಸಿ ನಂತರ ಕನ್ನಡ ಗೀತೆ ಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ಮಾತನಾಡಿ,
ಕರ್ನಾಟಕ ರಾಜ್ಯೋತ್ಸವದ ಪೂರ್ವವಾಗಿ ಶುಕ್ರವಾರ ಏಕಕಾಲದಲ್ಲಿ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಆಯೋಜಿಸಲಾಗಿದೆ. ಆಗಾಗಿ ನಮ್ಮ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದೆ ಎಂದರು.

ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನನ್ನ ನಾಡು-ನನ್ನ ಹಾಡು ಎಂಬ ಶೀರ್ಷಿಕೆಯಡಿ ಕನ್ನಡದ ಆಯ್ದ 6 ಗೀತೆಗಳ ಸಮೂಹ ಗಾಯನ ಏರ್ಪಾಡು ಮಾಡಲಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ ಹಾಗೂ ಹಚ್ಚೇವು ಕನ್ನಡದ ದೀಪಾ, ಬಾರಿಸು ಕನ್ನಡ ಡಿಂಡಿಮವ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಡಾ. ಹಂಸಲೇಖ ರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಏಕಕಾಲದಲ್ಲಿ ಹಾಡಲಾಯಿತು.

ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಉಮೇಶ್,ಉಪನ್ಯಾಸಕರಾದ ಮಹದೇವ್, ನಾಗರಾಜ್, ಸ್ಟಿಒನ್, ಶಿಕ್ಷಕರಾದ ರೇವತಿ, ರೋಹಿಣಿ, ಆಶಾ, ಹೇಮಂತ್, ಗೀತಾ,ಅಡುಗೆ ಸಿಬ್ಬಂದಿ, ಶಾಲಾ ಸಿಬ್ಬಂದಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ