Mysore
22
overcast clouds

Social Media

ಶನಿವಾರ, 04 ಜುಲೈ 2026
Light
Dark

ಫೆ.19ರಂದು ಪತ್ರಕರ್ತ ಸುದೇಶ ದೊಡ್ಡಪಾಳ್ಯರವರ ಪುಸ್ತಕಗಳ ಬಿಡುಗಡೆ

ಮೈಸೂರು : ಪತ್ರಕರ್ತ ಸುದೇಶ ದೊಡ್ಡಪಾಳ್ಯ ರವರು ರಚಿಸಿರುವ ಈಶಾನ್ಯ ದಿಕ್ಕಿನಿಂದ (ಅಂಕಣ ಬರಹ), ಹಂಗರಹಳ್ಳಿಯ ಬರ್ಬರ ಸಂಕೋಲೆಗಳು (ವಿಭಿನ್ನ ಬರಹಗಳ ಕಟ್ಟು), ಒಲವು ನಮ್ಮ ಬದುಕು (ಪ್ರೇಮ ಕಥನಗಳ ಸರಣಿ-ಮೂರನೆಯ ಮುದ್ರಣ) ಪುಸ್ತಕಗಳು ಭಾನುವಾರದಂದು (19-02-2023) ನಗರದ ಹುಣಸೂರು ರಸ್ತೆಯ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಬಿಡುಗುಡೆಗೊಳ್ಳಲಿವೆ.

ಪತ್ರಕರ್ತ ಸುದೇಶ ದೊಡ್ಡಪಾಳ್ಯ ರವರು
ಪತ್ರಕರ್ತ ಸುದೇಶ ದೊಡ್ಡಪಾಳ್ಯ ರವರು

ಪತ್ರಕರ್ತರಾದ ಕೃಷ್ಣಪ್ರಸಾದ್‌ರವರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ, ಪುಸ್ತಕಗಳ ಕುರಿತು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟರವರು ಮಾತನಾಡಲಿದ್ದಾರೆ, ಗ್ರೀನ್‌ ಆಸ್ಕರ್‌ ಪ್ರಶಸ್ತಿ ಪುರಸ್ಕೃತರಾದ ಕೃಪಾಕರ ಸೇನಾನಿ ಅವರುಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


ಅಂದು ಬಿಡುಗಡೆಗೊಳ್ಳಲಿರುವ ಸುದೇಶ ದೊಡ್ಡಪಾಳ್ಯರವರ ಪುಸ್ತಕಗಳು  ವಿಸ್ಮಯ ಬುಕ್‌ಹೌಸ್‌ ಮೂಲಕ ಮುದ್ರಣಗೊಂಡಿವೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪ್ರಕಾಶ್‌ ಚಿಕ್ಕಪಾಳ್ಯ ಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!