ಹನೂರು: ಮಲೆಮಹದೇಶ್ವರ ಬೆಟ್ಟದ ವಿಷಜಂತು ನಿವಾರಕನಿಗೆ ಬಿಜೆಪಿ ಜಿಲ್ಲಾ ಸಂಯೋಜಕ ಜನಧ್ವನಿ ಬಿ. ವೆಂಕಟೇಶ್ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಲೆ ಮಾದೇಶ್ವರ ಬೆಟ್ಟದ ಕಾಡು ಹೊಲದ ನಿವಾಸಿ ಪುಟ್ಟ ತಂಬಡಿ ರವರು ಕಳೆದ 40 ವರ್ಷಗಳಿಂದ ವಿಷಜಂತುಗಳ ಕಡಿತಕ್ಕೆ ಉಚಿತ ಔಷಧ, ರೋಗಿಗಳಿಗೆ ಹೊಟ್ಟೆ ತುಂಬಾ ಊಟ ಹಾಕಿಸುತ್ತಿದ್ದರು. ಇದುವರೆಗೂ 270 ಮಂದಿಗೆ ಹಾವು ಚೇಳಿನ ಕಡಿತಕ್ಕೆ ಉಚಿತ ಚಿಕಿತ್ಸೆ ಕೊಟ್ಟಿದ್ದು ಎಲ್ಲರೂ ಗುಣಮುಖರಾಗಿ ತೆರಳಿದ್ದಾರೆ. ಇವರು ಅಗತ್ಯ ನೆರವಿಗೆ ಮೊರೆ ಇಟ್ಟಿದ್ದರು.
ಈ ಸಂಬಂಧ, ಆಗಸ್ಟ್ 13ರಂದು ಆಂದೋಲನ ಪತ್ರಿಕೆಯಲ್ಲಿ “ವಿಷಜಂತು ನಿವಾರಕನಿಗೆ ಬೇಕಿದೆ ನೆರವು ಎಂಬ” ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ಆಂದೋಲನ ಪತ್ರಿಕಾ ವರದಿಗೆ ಸ್ಪಂದಿಸಿದ ಬಿಜೆಪಿ ಜಿಲ್ಲಾ ಸಂಯೋಜಕ ಜನಧ್ವನಿ ವೆಂಕಟೇಶ್ ಅವರು ಮಲೆಮಹದೇಶ್ವರ ಬೆಟ್ಟದ ಪುಟ್ಟ ತಂಬಡಿ ರವರಿಗೆ 50 ಸಾವಿರ ಮೌಲ್ಯದ ಎರಡು ಮಂಚ, ಎರಡು ಹಾಸಿಗೆ 10 ಚೇರ್, ನೆಲಕ್ಕೆ ಟೈಲ್ಸ್ ಗಳನ್ನು ಕೊಡಿಸುವ ಮೂಲಕ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮನೆಮಾತಾಗಿದ್ದಾರೆ.