Mysore
29
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಜನಧ್ವನಿ ವೆಂಕಟೇಶ್ ರನ್ನು ಬೆಂಬಲಿಸಿ ಬಿಜೆಪಿಗೆ ಹಲವರ ಸೇರ್ಪಡೆ

ಹನೂರು : ತಾಲೂಕಿನ ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಒಬಿಸಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜನದ್ವನಿ ಬಿ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ದೊಡ್ಡಲತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಬಸಮ್ಮರವರು ಮಾತನಾಡಿ ಜನದ್ವನಿ ಬಿ ವೆಂಕಟೇಶ್ ರವರು ಹಿಂದುಳಿದ ವರ್ಗದವರಾಗಿದ್ದರು ಸಹ ಕ್ಷೇತ್ರದ ಎಲ್ಲ ಸಮಾಜದವರನ್ನು ಒಂದೇ ರೀತಿ ನೋಡುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಅವರ ಸೇವೆ ನಿರಂತರವಾಗಿದೆ. ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ, ನೂರಾರು ಕಣ್ಣಿನ ತಪಾಸಣಾ ಶಿಬಿರಗಳು, ಋಣ ಸಂದಾಯ ಆಂಬುಲೆನ್ಸ್ ಸೇವೆ ಒದಗಿಸಿದ್ದಾರೆ ಇದಲ್ಲದೆ ಕುಡಿಯುವ ನೀರು ಸಮಸ್ಯೆ ಇರುವ ಕೆಲವು ಗ್ರಾಮಗಳಿಗೆ ಸ್ವಂತ ಹಣದಿಂದ ಅಧಿಕಾರವಿಲ್ಲದಿದ್ದರೂ ಕುಡಿಯುವ ನೀರು ಒದಗಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಅಧಿಕಾರ ನೀಡಿದರೆ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಲಿದೆ. ಆದ್ದರಿಂದ ಹನೂರು ಕ್ಷೇತ್ರದ ಮತದಾರರು ಜನದ್ವನಿ ಬಿ ವೆಂಕಟೇಶ್ ರವರನ್ನು ಬೆಂಬಲಿಸಿ ಹನೂರು ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಜನದ್ವನಿ ಬಿ ವೆಂಕಟೇಶ್ ಮಾತನಾಡಿ ನಮ್ಮ ಸಮಾಜಮುಖಿ ಸೇವಾ ಕಾರ್ಯಗಳನ್ನು ಮೆಚ್ಚಿ ದೊಡ್ಡಲತ್ತೂರು ಗ್ರಾಮದ ಅಧ್ಯಕ್ಷರು ಉಪಾಧ್ಯಕ್ಷರಾದಿಯಾಗಿ ಸದಸ್ಯರುಗಳು ನನ್ನನ್ನು ಬೆಂಬಲಿಸಿ ಬಿಜೆಪಿ ಪಕ್ಷಕ್ಕೆ ಬಂದಿರುವುದರಿಂದ ನನಗೆ ಆನೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಉತ್ತಮವಾಗಿ ಸಂಘಟಿಸಿ ಹನೂರು ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಲಿದ್ದೇನೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ಶೋಭಾ, ಸದಸ್ಯರುಗಳಾದ ರವಿ, ಕುಮಾರ್, ಪ್ರೇಮ ಮುಖಂಡರುಗಳಾದ ವೆಂಕಟಾಚಲ ಜನದ್ವನಿ ಬಿ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಗ್ರಾಪಂ ಸದಸ್ಯರಾದ ರಾಜಪ್ಪ, ವರಪ್ರಸಾದ್, ಮುಖಂಡರುಗಳಾದ ಚಿನ್ನರಾಜು, ಮಲ್ಲಣ್ಣ, ಮನು, ಅರವಿಂದ್, ಲೋಕೇಶ್ ಜತ್ತಿ, ಪ್ರವೀಣ್ ಕುಮಾರ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!