ಮುಂದಿನ ವರ್ಷದಿಂದ ಮಡಿಕೇರಿ ದಸರಾದಲ್ಲೂ ಜಂಬೂ ಸವಾರಿ ಆರಂಭಿಸಲು ನಿರ್ಧಾರ
ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾವನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಜಂಬೂ ಸವಾರಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ.
ರಾಜರ ಆಳ್ವಿಕೆ ಕಾಲಘಟ್ಟದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗ ಮೆರವಣಿಗೆ ಮೂಲಕ ಮಡಿಕೇರಿ ದಸರಾ ಪ್ರಾರಂಭವಾಯಿತು. ತದನಂತರ ಮಡಿಕೇರಿ ವ್ಯಾಪ್ತಿಯಲ್ಲಿರುವ ಹತ್ತು ದೇವಾಲಯಗಳಿಂದ ಮಂಟಪ ಶೋಭಾಯಾತ್ರೆ ಮೂಲಕ ದಸರಾಕ್ಕೆ ವಿಶೇಷ ಮೆರಗು ನೀಡಿತ್ತು. ದಕ್ಷಿಣ ಕೊಡಗಿನ ಕೇಂದ್ರ ಸ್ಥಾನ ಗೋಣಿಕೊಪ್ಪದಲ್ಲಿಯೂ ದಸರಾ ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಹೀಗಾಗಲೇ ಹಲವು ಹೊಸ ಚಿಂತನೆಯೊಂದಿಗೆ ಜನೋತ್ಸವದ ಮೆರಗು ಹೆಚ್ಚಿಸಲಾಗುತ್ತಿದೆ. ಕೆಲವು ವರ್ಷಗಳಿಂದ ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ ಮೂಲಕ ಸಂಭ್ರಮ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಜಂಬೂ ಸವಾರಿ ಆಯೋಜಿಸುವ ಬಗ್ಗೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷೃಣಾಧಿಕಾರಿ ನಿರಂಜನ್ ಮೂರ್ತಿ ಘೋಷಿಸುವುದರ ಮೂಲಕ ಜನೋತ್ಸವಕ್ಕೆ ಮತ್ತಷ್ಟು ಮೆರಗು ದೊರಕಲಿದೆ.
ಜಂಬೂ ಸವಾರಿ ಮೂಲಕ ಮೈಸೂರು ದಸರಾ ವಿಶ್ವವಿಖ್ಯಾತಿ ಹೊಂದಿದೆ. ಅದೇ ರೀತಿ ಕೊಡಗಿನಲ್ಲಿಯೂ ಜಂಬೂ ಸವಾರಿ ಪ್ರಾರಂಭಿಸುವುದರ ಮೂಲಕ ಮಡಿಕೇರಿ ದಸರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಲಾಗಿದೆ. ಮಡಿಕೇರಿಯೊಂದಿಗೆ ಗೋಣಿಕೊಪ್ಪ ದಸರದಲ್ಲಿಯೂ ಜಂಬೂ ಸವಾರಿ ಮಾಡುವ ಬೇಡಿಕೆ ವ್ಯಕ್ತವಾಗಿದೆ.
ಚಾಮುಂಡಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡುವುದರ ಮೂಲಕ ಗೋಣಿಕೊಪ್ಪ ದಸರಾ ಪ್ರಾರಂಭವಾಗುತ್ತದೆ. ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ವೇದಿಕೆಯಲ್ಲಿ ಪ್ರತಿನಿತ್ಯ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಡಿಕೇರಿ, ಗೋಣಿಕೊಪ್ಪ ದಸರಾ ಸಂದರ್ಭದಲ್ಲಿ ವಿಜುಂದಶಮಿಯಂದು ಜಂಬೂ ಸವಾರಿ ಆಯೋಜಿಸುವುದರಿಂದ ದಸರಾ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ.
ಕೊಡಗಿನಲ್ಲಿ ಮೂರು ಸಾಕಾನೆ ಶಿಬಿರ ಇದೆ. ಮೈಸೂರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಹುತೇಕ ಸಾಕಾನೆಗಳು ಕೊಡಗಿನ ಸಾಕಾನೆ ಶಿಬಿರದಿಂದ ತೆರಳುತ್ತವೆ. ಪ್ರಸ್ತುತ 70 ಸಾಕಾನೆಗಳು ಕೊಡಗಿನ ಮೂರು ಆನೆ ಶಿಬಿರದಲ್ಲಿವೆ. ದಸರಾ ವೇಳೆ ಜಂಬೂ ಸವಾರಿ ಆಯೋಜಿಸುವುದರ ಮೂಲಕ ಸಾಕಾನೆಗಳನ್ನು ರಾಜಬೀದಿಯಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಮಡಿಕೇರಿ ದಸರಾ ಆಚರಣೆಗೆ ಮುಂದಿನ ವರ್ಷದಿಂದ ಜಂಬೂ ಸವಾರಿ ಸೇರ್ಪಡೆ ವಾಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಜಂಬೂ ಸವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೊಡಗಿನ ಸಾಕಾನೆ ಶಿಬಿರದಲ್ಲಿ 70 ಆನೆಗಳಿದ್ದು, ಜಂಬೂ ಸವಾರಿ ಸೇರ್ಪಡೆಯಾದಲ್ಲಿ ದಸರಾಕ್ಕೆ ಮತ್ತಷ್ಟು ಮೆರಗು ಸಿಗಲಿದೆ. -ನಿರಂಜನ್ ಮೂರ್ತಿ, ಮುಖ್ಯ ಅರಣ್ಯ ಸಂರಕ್ಷೃಣಾಧಿಕಾರಿ, ಕೊಡಗು ವೃತ್ತ
ಜಂಬೂ ಸವಾರಿ ಪ್ರಾರಂಭಿಸುವ ಬಗ್ಗೆ ಸಿಸಿಎಫ್ ವ್ಯಕ್ತಪಡಿಸಿರುವ ಅಭಿಪ್ರಾy ಸ್ವಾಗತರ್ಹ. ಜಂಬೂ ಸವಾರಿಗೆ ಸರ್ಕಾರದಿಂದ ಅನುಮತಿ ಪಡೆಯುವ ಮುನ್ನ ಸಾಧಕ-ಬಾಧಕದ ಕುರಿತು ಹಿರಿಯರು, ಅನುಭವಿಗಳು ಸೇರಿ ಚರ್ಚಿಸಬೇಕು. ದೇವಿ ಪ್ರತಿಷ್ಠಾಪನೆ, ಮೆರವಣಿಗೆ ಸೇರಿದ್ದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿದ್ದಂತೆ ಎದುರಾಗುವ ಪ್ರಶ್ನೆಗಳಿಗೆ ಅಷ್ಟಮಂಗಲ ಪ್ರಶ್ನೆ ಮೂಲಕ ಉತ್ತರ ಕಂಡುಕೊಳ್ಳಬೇಕಾಗಿದೆ. -ಕೆ.ಎಸ್.ರಮೇಶ್, ಕಾರ್ಯಾಧ್ಯಕ್ಷೃರು, ಮಡಿಕೇರಿ ನಗರ ದಸರಾ ಸಮಿತಿ
ಕರಗ ಮೆರವಣಿಗೆ, ದಶಮಂಟಪ ಶೋಭಾಯಾತ್ರೆ ಮೂಲಕ ಜನೋತ್ಸವ ಮಡಿಕೇರಿ ದಸರಾ ನಾಡಿನ ಗಮನ ಸೆಳೆದಿದೆ. ಜಂಬೂ ಸವಾರಿ ಸೇರ್ಪಡೆಯಿಂದ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಬಹುದು. ವಿಜಯದಶಮಿುಂಂದು ಜಂಬೂ ಸವಾರಿ ವಾಡಬಹುದು. ಈ ಬಗ್ಗೆ ಸಾಧಕ- ಬಾಧಕ ಕುರಿತು ಚರ್ಚಿಸಿದ ಬಳಿಕ ಸೂಕ್ತ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. -ಮನು ಮಂಜುನಾಥ್, ಅಧ್ಯಕ್ಷೃರು, ಮಡಿಕೇರಿ ನಗರ ದಸರಾ ಸಮಿತಿ