Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ತನಿಖೆಗೆ ಮನೆಗಳ ಆಯ್ಕೆ ವಿಚಾರ; ಹಲವರಲ್ಲಿ ನಡುಕ

ಕೋಟೆ: ಮಳೆ ಹಾನಿಗೊಳಗಾದ ಮನೆಗಳ ಆಯ್ಕೆಯ ಅವ್ಯವಹಾರ ಪತ್ತೆಗೆ ಉನ್ನತ ಮಟ್ಟದ ತನಿಖೆ ಶುರು

ಮಂಜು ಕೋಟೆ
ಹೆಚ್.ಡಿ.ಕೋಟೆ: ಕ್ಷೇತ್ರದಲ್ಲಿ ಮಳೆ ಹಾನಿಗೆ ಒಳಗಾಗಿರುವ ಮನೆಗಳ ಆಯ್ಕೆಯಲ್ಲಿ ಅಧಿಕಾರಿಗಳು ನೌಕರರು ಹಾಗೂ ಕೆಲ ಮುಖಂಡರು ನಡೆಸಿರುವ ವ್ಯವಹಾರವನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ತನಿಖೆ ಪ್ರಾರಂಭಗೊಂಡಿರುವುದರಿಂದ ಅನೇಕರಲ್ಲಿ ನಡುಕ ಉಂಟಾಗಿದೆ.
ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಸಾವಿರಾರು ಮನೆಗಳು ಹಾನಿಯಾಗಿವೆ ಎಂದು ಪೈಪೋಟಿಯ ಮೂಲಕ ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ತಹಸಿಲ್ದಾರ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್, ಕೆಲ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಮೂರೂವರೆ ಲಕ್ಷ ಮತ್ತು ೫ ಲಕ್ಷ ರೂ. ವೆಚ್ಚದ ಮನೆಗಳ ಆಯ್ಕೆಗೆ ಸರಗೂರು ತಾಲ್ಲೂಕಿನಲ್ಲಿ ೧೫೬೮ ಮತ್ತು ಕೋಟೆ ತಾಲ್ಲೂಕಿನಲ್ಲಿ ೮೪೦ ಮನೆಗಳನ್ನು ಆ್ಂಕೆು ಮಾಡಿಸಲಾಗಿತ್ತು. ಮುಂದುವರಿದ ಭಾಗವಾಗಿ ಕ್ಷೇತ್ರದಲ್ಲಿ ಮತ್ತೆ ೯೨೪ ಅರ್ಜಿಗಳು ಬಂದಿವೆ.
ಅರ್ಹ ಫಲಾನುಭವಿಗಳು ಬಿದ್ದಿರುವ ನಮ್ಮ ಮನೆಗಳನ್ನು ಆ್ಂಕೆು ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ನಾವುಗಳು ಬೀದಿಪಾಲಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತು ಶಾಸಕರಾದ ಅನಿಲ್ ಚಿಕ್ಕಮಾದು ಸೇರಿದಂತೆ ಇನ್ನೂ ಅನೇಕ ಪ್ರಮುಖರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಶಾಸಕರು ಸಹ ಈ ವಿಚಾರವಾಗಿ ಅನೇಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಅನೇಕ ರೈತ ಮುಖಂಡರು, ಬಡಜನರು, ಅರ್ಹ ಫಲಾನುಭವಿಗಳು ಅಧಿಕಾರಿಗಳ ನಡವಳಿಕೆಯಿಂದ ಬೇಸರಗೊಂಡು, ತಾಲ್ಲೂಕು ಕಚೇರಿಯಲ್ಲಿ ತಹಸಿಲ್ದಾರ್ ರತ್ನಾಂಬಿಕ ಅವರ ಜತೆ ಮಾತಿನ ಚಕಮಕಿ, ಗಲಾಟೆ ನಡೆಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಸರಗೂರು ತಾಲ್ಲೂಕಿನಿಂದ ರತ್ನಾಂಬಿಕೆಯವರನ್ನು ವರ್ಗಾಯಿಸಿ ನಂಜನಗೂಡಿನ ಶಿವಮೂರ್ತಿ ಎಂಬ ತಹಸಿಲ್ದಾರರನ್ನು ನೇಮಕ ಮಾಡಿ, ಜಿಪಂ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಿಂಗರಾಜ್ ಅವರನ್ನು ಬದಲಾಯಿಸಿ ಸರಗೂರು ತಾಲ್ಲೂಕಿನಲ್ಲಿ ಆಯ್ಕೆ ಮಾಡಲಾಗಿರುವ ಪ್ರತಿಯೊಬ್ಬರ ಮನೆಗಳ ಸ್ಥಿತಿಗತಿ ಮತ್ತು ವರದಿಯನ್ನು ಪರಿಶೀಲಿಸಲು ೩ ತಂಡಗಳನ್ನು ನೇಮಿಸಿ ವಿವಿಧ ಭಾಗದ ೩ ತಹಸಿಲ್ದಾರ್,ಮುಡಾ ಇಂಜಿನಿಯರ್ ಗಳು ಹಾಗೂ ಪೊಲೀಸರಿಗೆ ಉಸ್ತುವಾರಿ ನೀಡಿದ್ದಾರೆ.
ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದರಿಂದ ಅನೇಕ ಅಧಿಕಾರಿಗಳು ಮತ್ತು ನೌಕರರು, ಕೆಲ ಮುಖಂಡರು ಸುಳ್ಳು ದಾಖಲಾತಿ ನೀಡಿ ಮನೆ ಮಾಡಿಸಿಕೊಂಡಿರುವವರಲ್ಲಿ ಆತಂಕ ಎದುರಾಗಿದೆ. ಅರ್ಹ ಫಲಾನುಭವಿಗಳು ಈಗಲಾದರೂ ನಮಗೆ ಮನೆಯನ್ನು ಕೊಡಿಸುವಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಮುಂದಾಗಿ ಕೆಲಸ ನಿರ್ಮಿಸುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ


ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಸರಗೂರಿನಲ್ಲಿ ಕೆಲಸ ನಿರ್ವಹಿಸಲು ನನ್ನನ್ನು ನೇಮಕ ಮಾಡಿದ್ದು ೩ ತಂಡಗಳು ಪರಿಶೀಲನೆ ಕಾರ್ಯದಲ್ಲಿ ತೊಡಗಿವೆ. ವರದಿ ನೀಡಿದ ನಂತರ ಅವ್ಯವಹಾರ ಮಾಡಿರುವ ಅಧಿಕಾರಿಗಳು, ನೌಕರರು, ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು.
ಶಿವಮೂರ್ತಿ, ತಹಸಿಲ್ದಾರ್, ಸರಗೂರು ತಾ.ತಾ


ತಾಲ್ಲೂಕಿನಲ್ಲಿ ಮನೆಗಳ ಅಯ್ಕೆ ವಿಚಾರದಲ್ಲಿ ಅನೇಕ ಸಮಸ್ಯೆಗಳು ಎದುರಾಗಲಿವೆ. ಅನೇಕರ ಒತ್ತಡಕ್ಕೆ ಮಣಿಯಬೇಕಾಗುತ್ತದೆ ಎಂದು ತಹಸಿಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚೆಲುವರಾಜು ಅವರು ೧ ತಿಂಗಳ ಹಿಂದೆ ಒಂದೂವರೆ ತಿಂಗಳ ಕಾಲ ರಜೆ ಹಾಕಿ ತೆರಳಿದ್ದಾರೆ. ಕೋಟೆ ತಾಲ್ಲೂಕಿನಲ್ಲೂ ಮನೆಗಳ ಆಯ್ಕೆಯ ಪರಿಶೀಲನೆ ತಂಡದ ಮೂಲಕ ನಡೆದಾಗ ಇಲ್ಲಿನ ಕರ್ಮಕಾಂಡವು ಬಯಲಿಗೆ ಬರಲಿದೆ.

ಶ್ರೀನಿವಾಸ್ ಎಚ್ ಡಿ ಕೋಟೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!