ಮೈಸೂರು : ನೃತ್ಯ ಗಿರಿಯ ಬೆಳ್ಳಿ ಹಬ್ಬ ಅಂಗವಾಗಿ ಮತ್ತು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮೋನೋಡ್ರಾಮ ‘ಇಳೆ – ಮಳೆ’ ಏಕವ್ಯಕ್ತಿಯ ನಾಟಕವನ್ನು ನಗರದ ಗಾನಭಾರತೀಯಲ್ಲಿ ಪ್ರದರ್ಶಿಸಲಾಗುತ್ತಿದೆ. ನಾಟಕವು ಆಗಸ್ಟ್ 13 ಹಾಗೂ 14ನೇ ತಾರೀಖಿನಂದು ಸಂಜೆ 6:30ಕ್ಕೆ ಮೊದಲ ಪ್ರದರ್ಶನ ಮತ್ತು 7:30ಕ್ಕೆ ಎರಡನೇ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ನಾಟಕ ನೋಡಲು ಬರುವವರಿಗೆ ಪ್ರವೇಶ ದರವು 50 ರೂ ಗಳನ್ನು ನಿಗದಿ ಮಾಡಲಾಗಿದೆ.
ಇಳೆ – ಮಳೆ ನಾಟಕವನ್ನು ಎಂ. ಎಸ್. ವೇಣು ಗೋಪಾಲ್ ರವರು ರಚನೆ ಮಾಡಿದ್ದು, ನಾಟಕದ ನಿರ್ದೇಶನವನ್ನು ನಾ. ಶ್ರೀನಿವಾಸ್, ಹಾಗೂ ಸಂಗೀತ ಪ್ರಭು ರಾವ್ ಹಾಗೂ ಮೃತ್ಯುಂಜಯ ಹಿರೇಮಠ್ ರವರು ನೀಡಿದ್ದಾರೆ.
ತಂಡದಲ್ಲಿ
ತಬಲಾ – ರಮೇಶ್ ಧನುರ್,
ರಂಗ ವಿನ್ಯಾಸ – ಡಾ. ಗೀತಾಂಜಲಿ ಆಚಾರ್,
ವಿಶೇಷ ವಾದ್ಯ – ಡಿಡ್ ಗಿರೋ – ಮೇಘಾ
ಇವರುಗಳು ನಿರ್ವಹಣೆ ಮಾಡಲಿದ್ದಾರೆ. ಎಂದು ನೃತ್ಯ ಗಿರಿ ನಿರ್ದೇಶಕರಾದ ಡಾ. ಕೃಪಾ ಫಡ್ಕೆ ರವರು ತಿಳಿಸಿದ್ದಾರೆ.