ಹನೂರು: ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರ ರಾಜ್ಯ ಹಾಗೂ ಅಂತರ ರಾಜ್ಯ ಮಟ್ಟದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಕ್ಷೇತ್ರವಾಗಿದ್ದು, ಇತ್ತೀಚೆಗೆ ಅರ್ಚಕರ ನಡುವೆ ನಡೆದಿರುವ ಗುಂಪುಗಾರಿಕೆ ಹಾಗೂ ಹುಂಡಿಗೆ ಬೆಂಕಿ ಹಚ್ಚಿರುವುದು ದುರದೃಷ್ಟಕರ ಸಂಗತಿ. ಎರಡೂ ಬಣಗಳು ಈ ಕ್ಷೇತ್ರದ ಗೌರವ ಕಾಪಾಡಲು ಶಾಂತಿಯಿಂದ ಒಪ್ಪಂದ ಮಾಡಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದ್ದಾರೆ.
ಆಡಳಿತ ಮಂಡಳಿಯವರು ಮಧ್ಯೆ ಪ್ರವೇಶಿಸಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಾರದಂತೆ ಮತ್ತು ಲಕ್ಷಾಂತರ ಜನರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.