Mysore
34
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಅರ್ಜುನನ ಸಾವಿಗೆ ಸಂತಾಪ ಸೂಚಿಸಿದ ಹೆಚ್‌.ಸಿ.ಮಹದೇವಪ್ಪ

ಮೈಸೂರು: ಸತತ ಎಂಟು ವರ್ಷಗಳ ಕಾಲ ಮೈಸೂರು ಅಂಬಾರಿಯನ್ನು ಹೊತ್ತ ಅರ್ಜುನ, ಕಾಡಾನೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ್ದಾನೆ. ಅರ್ಜುನನ ಸಾವಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಸಂತಾಪವನ್ನು ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‌ ಮೂಲಕ ದಸರಾ ಆನೆ ಅರ್ಜುನ ಸಾವಿಗೆ ಸಂತಾಪ ಸೂಚಿಸಿರುವ ಸಚಿವ ಎಚ್ ಸಿ ಮಹದೇವಪ್ಪ, ಎಲ್ಲಾ ಹಂತಗಳಲ್ಲೂ ದಸರಾಗೆ ಬಂದು ಅರ್ಜುನ ಜನರ ಮನಸ್ಸಿಗೆ ಸಂತಸ ನೀಡಿದ್ದ. ಎಂಟು ವರ್ಷಗಳ ಕಾಲವೂ ಅದೇ ಸ್ಥಿರತೆಯಿಂದ ಅರ್ಜುನ ಅಂಬಾರಿಯನ್ನು ಹೊರುತ್ತಿದ್ದ.

ಕೇವಲ ಪ್ರಾಣಿಯಾಗದೆ ಎಲ್ಲರ ಸೊಬಗಿನ ನೆನಪಾಗಿದ್ದ. ಅದು ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡ ಅಪರೂಪದ ಬಂಧ. ಅರ್ಜುನ ಬದುಕು ಅಂತ್ಯವಾದ ಬಗ್ಗೆ ಕೇಳಿ ಮನಸ್ಸು ಭಾರವಾಯಿತು ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!