Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಇದು 1 ವರ್ಷ 8 ತಿಂಗಳ ಪುಟ್ಟ ಪೋರಿಯ ಸಾಧನೆ

baby archivement

ಹಾಸನ: 1 ವರ್ಷ 8 ತಿಂಗಳ ಪುಟ್ಟ ಪೋರಿ 215ಕ್ಕಿಂತಲೂ ಹೆಚ್ಚು ಚಟುವಟಿಕೆಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ.

ಹಾಸನದ ನಾಗರನವಿಲೆಯಲ್ಲಿ ವಾಸವಿದ್ದ ರಾಹುಲ್‌ ಹಾಗೂ ರಮ್ಯಾ ದಂಪತಿಯ ಪುತ್ರಿ ರಾಮರಕ್ಷಾ ಎಂಬಾಕೆ 215ಕ್ಕಿಂತಲೂ ಹೆಚ್ಚು ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾಳೆ.

ರಾಹುಲ್‌ ಹಾಗೂ ರಮ್ಯಾ ದಂಪತಿ ಕೆಲಸದ ನಿಮಿತ್ತ ಕಾರವಾರದಲ್ಲಿದ್ದು, ಮಗಳ ಈ ಸಾಧನೆಯಿಂದ ಸಂತೋಷಗೊಂಡಿದ್ದಾರೆ.

1 ವರ್ಷ 8 ತಿಂಗಳ ವಯಸ್ಸಿನಲ್ಲಿ ಪುಟ್ಟ ಪೋರಿ ರಾಮರಕ್ಷಾ 200ಕ್ಕಿಂತಲೂ ಹೆಚ್ಚು ಚಟುವಟಿಕೆಗಳನ್ನು ಮಾಡುವ ಮೂಲಕ ಮಕ್ಕಳ ವಿಭಾಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾಳೆ.

100ಕ್ಕೂ ಫ್ಲಾಶ್ ಕಾರ್ಡ್‌ಗಳ ಗುರುತಿಸುವಿಕೆ ಜೊತೆಗೆ ದೇವರ ಹೆಸರುಗಳು, ದಶಾವತಾರ, ಮಂತ್ರ, ಶ್ಲೋಕಗಳು, ದೇವರವಾಹನಗಳನ್ನು ಹೇಳುತ್ತಾಳೆ.

ಜೊತೆಗೆ 25ಕ್ಕೂ ಹೆಚ್ಚು ತರಕಾರಿಗಳ ಹೆಸರು, 30ಕ್ಕೂ ಹೆಚ್ಚು ಹಣ್ಣುಗಳ ಹಾಗೂ ಪ್ರಾಣಿಗಳ ಹೆಸರನ್ನು ಹೇಳಲಿದ್ದು, ಜೊತೆಗೆ ಕನ್ನಡ ವರ್ಣಮಾಲೆ, ಎಲೆಕ್ಟ್ರಾನಿಕ್ ಸಾಧನಗಳು, ರಾಷ್ಟ್ರೀಯ ಧ್ವಜ, ಭಾರತೀಯ ಕರೆನ್ಸಿ, ಭಾರತದ ಸ್ಮಾರಕಗಳು, ವಿಜ್ಞಾನಿ ಹೆಸರುಗಳು, 10ಕ್ಕೂ ಹೆಚ್ಚು ಹೂವುಗಳ ಹೆಸರುಗಳು, ಗಣಿತ ಚಿಹ್ನೆಗಳು, 38ಕ್ಕೂ ದಿನಸಿ ವಸ್ತುಗಳು, ಒಣಹಣ್ಣುಗಳ ಹೆಸರನ್ನು ಹೇಳುತ್ತಾಳೆ.

ಜೊತೆಗೆ ಮಳೆಬಿಲ್ಲಿನ ಬಣ್ಣಗಳು, ಪಂಚಭೂತಗಳು, ನವಗ್ರಹಗಳು, ವಾರಗಳು, ತಿಂಗಳುಗಳು, ಗ್ರಹಗಳು, ಸಂಚಾರ ಸಂಕೇತಗಳು, ಮಾಯಾ ಪದಗಳು, ಆಹಾರದ ಹೆಸರುಗಳು, ವೈವಿಧ್ಯಮಯ ಪ್ರಾಣಿಗಳು ಮತ್ತು ಅದರ ಶಬ್ದ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿರುದ್ಧಾರ್ಥಕ ಪದಗಳನ್ನು ಹೇಳಲಿದ್ದು, ಎಲ್ಲರನ್ನು ಅಚ್ಚರಿಗೊಳಿಸುತ್ತಿದ್ದಾಳೆ.

ಇವೆಲ್ಲದರ ಜೊತೆಗೆ ಆಟಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳು, ಗ್ರಹಗಳು, ಸನ್ನೆಗಳು ಸೇರಿದಂತೆ ಅನೇಕ ಚಟುವಟಿಕೆ ಮಾಡಲಿದ್ದಾಳೆ.

ಇದೆಲ್ಲಾ ಸಾಧನೆ ಮಾಡಿದ ಪುಟ್ಟ ಪೋರಿ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌, ವಲ್ಡ್‌ ರೆಕಾರ್ಡ್, ಸೂಪರ್‌ ಅಚೀವರ್‌ ಅವಾರ್ಡ್‌ 2025, ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್‌ ಗೌರವಕ್ಕೆ ಪಾತ್ರರಾಗಿದ್ದಾಳೆ.

 

Tags:
error: Content is protected !!