Mysore
22
overcast clouds

Social Media

ಗುರುವಾರ, 09 ಏಪ್ರಿಲ 2026
Light
Dark

ಮಸ್ಲಿಮರ ಮತಗಳಿಕೆಗಾಗಿ ಕಾಂಗ್ರೆಸ್‌ನಿಂದ ಐಕ್ಯತಾ ಯಾತ್ರೆ: ಸಚಿವ ಬಿ.ಸಿ.ನಾಗೇಶ್

ಹಾಸನ:  ಆರ್‌ಎಸ್‌ಎಸ್‌ಗೂ ‘ಭಾರತ ಐಕ್ಯತಾ ಯಾತ್ರೆಗೂ  ಏನು ಸಂಬಂಧ, ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ರೆ ಮುಸ್ಲಿಮರ ಓಟು ನಮಗೆ ಬರುತ್ತೆ ಎಂಬ ದುರಾಸೆಯಿಂದ ಕಾಂಗ್ರೆಸ್ ಮುಖಂಡರು ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದರು.

ರಾಷ್ಟ್ರೀಯ ಪಕ್ಷ ಕಾಂಗ್ರೆಸ್  ಪ್ರತಿಪಕ್ಷವಾಗಿ ದೇಶದಲ್ಲಿ ಏನು ಮಾಡಬೇಕಿತ್ತೋ ಆ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ದೂರಿದರು.  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈ ಎಳೆದು ಜೋಡಿಸೋ ಪ್ರಯತ್ನವನ್ನು ರಾಹುಲ್‌ ಗಾಂಧಿ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಜ್ಯದುದ್ದಕ್ಕೂ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಹೇಗೆ ಮಾತನಾಡುತ್ತಿದ್ದಾರೆ ಅನ್ನೋದನ್ನ ನಾವು ನೋಡುತ್ತಿದ್ದೇವೆ.  ಭಾರತ ಐಕ್ಯತಾ ಯಾತ್ರೆ ಉದ್ದಕ್ಕೂ ಮುಸ್ಲಿಮರ ಮತ ಸೆಳೆಯಲು ಮಾತನಾಡಿದ್ದಾರೆಯೇ ಹೊರತು, ದೇಶಕ್ಕಾಗಿ ಮಾತನಾಡಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!