Mysore
27
broken clouds

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಹಾಸನದಲ್ಲಿ ಮದುವೆಗೆ ಬಂದವರ ಮೇಲೆ ಕೋತಿ ಅಟ್ಯಾಕ್

ಹಾಸನ : ಮದುವೆಗೆಂದು ಬಂದಿದ್ದ ೮ ಜನರ ಮೇಲೆ ಕೋತಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಮದುವೆ ಮನೆಗೆ ಕೋತಿ ನುಗ್ಗಿ ಸಾಕಷ್ಟು ರಂಪಾಟ ನಡೆಸಿದೆ. ಊಟದ ಹಾಲ್‌ ಗೆ ತೆರಳಿ ಊಟ ಮಾಡುತ್ತಿದ್ದವರಿಗೂ ಕಾಟ ಕೊಟ್ಟಿದೆ.

ಸುಶೀಲಮ್ಮ, ಲೀಲಾವತಿ, ನಿಂಗೇಗೌಡ ಗೌರಮ್ಮ ಗಿರಿಜನ ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಮಂಗನ ಕಾಟಕ್ಕೆ ಮದುವೆಗೆ ಬಂದಿದ್ದವರು ಹೈರಾಣಾಗಿದ್ದರು. ಇನ್ನು ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕೋತಿಯನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Tags: