Mysore
23
overcast clouds

Social Media

ಶನಿವಾರ, 02 ಮೇ 2026
Light
Dark

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.

ಪ್ರವೀಣ್(‌45) ಎಂಬುವವರೇ ಮೃತ ವ್ಯಕ್ತಿ. ಅರಸೀಕೆರೆ ತಾಲ್ಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್‌ ಅರಸೀಕೆರೆ ಪಟ್ಟಣದಲ್ಲಿ ಆಟೋ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದರು.

ಜನವರಿ.12ರ ಸಂಜೆ ಅಂಗಡಿಯಲ್ಲಿ ವರ್ತಕರಿಗೆ ವಸ್ತುಗಳನ್ನು ನೀಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಪುತ್ರ ಪ್ರವೀಣ್‌ ಅವರ ಎದೆಯನ್ನು ಒತ್ತಿದ್ದಾನೆ. ಆದರೆ ಪ್ರವೀಣ್‌ ತಮ್ಮ ಅಂಗಡಿಯಲ್ಲೇ ಉಸಿರು ಚೆಲ್ಲಿದ್ದಾರೆ.

ಪ್ರವೀಣ್‌ ಕುಸಿದು ಬಿದ್ದು ಸಾವನ್ನಪ್ಪಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

Tags:
error: Content is protected !!