Mysore
21
few clouds

Social Media

ಸೋಮವಾರ, 05 ಜನವರಿ 2026
Light
Dark

ನಟ ಯಶ್‌ಗೆ ಭೂ ಒತ್ತುವರಿ ತೆರವು ಶಾಕ್:‌ ಮನೆಯ ಸುತ್ತ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ ತೆರವು

ಹಾಸನ: ರಾಕಿಂಗ್‌ ಸ್ಟಾರ್‌ ಯಶ್‌ಗೆ ಭೂ ಒತ್ತುವರಿ ತೆರವು ಶಾಕ್‌ ನೀಡಲಾಗಿದೆ. ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಕಾಂಪೌಂಡ್‌ನ್ನು ತೆರವು ಮಾಡಲಾಗಿದೆ.

ಹಾಸನದ ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ನಟ ಯಶ್‌ ತಾಯಿ ಪುಷ್ಪಾ ಅವರಿಗೆ ಸೇರಿದ ಮನೆ ನಿರ್ಮಿಸಲಾಗಿತ್ತು. ಮನೆಯ ಸುತ್ತಲೂ 1500 ಅಡಿಗಳಷ್ಟು ಅಕ್ರಮವಾಗಿ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ ಎಂದು ಜಾಗದ ಮಾಲೀಕರು ಆರೋಪಿಸಿದ್ದರು. ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು.

ಇದೀಗ ಕೋರ್ಟ್‌ ಆದೇಶದ ಮೇರೆಗೆ ಕೋರ್ಟ್‌ನಿಂದ ಅನುಮತಿ ಪಡೆದು ಲಕ್ಷ್ಮಮ್ಮ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಕಾಂಪೌಂಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ಗಳನ್ನು ಕೆಡವಲಾಯಿತು.

Tags:
error: Content is protected !!