ಹಾಸನ: ಹೊತ್ತ ಹರಕೆ ತೀರಿಸಿ ಬಂದ ಆ ಹೆಣ್ಣು ಮಗಳನ್ನು ಬಿಡಲಿಲ್ಲ ಯಮರಾಜ. ಇಡಿ ಕುಟುಂಬವನ್ನೇ ಬಲಿಪಡೆಯುವ ಮೂಲಕ ಅಟ್ಟಹಾಸ ಮೆರೆದಿದ್ದಾನೆ.
ಕೆಲಸಕ್ಕೆ ಸೇರುವ ಮೊದಲು ದೇವರ ದರ್ಶನ ಮಾಡಲು ಹೋದವರು ವಾಪಾಸಾಗುವಾಗ ಮಸಣ ಸೇರಿದ ಮನಕಲಕುವ ಘಟನೆಯಾಗಿದೆ. ಕುಮಾರಸ್ವಾಮಿ ಪುತ್ರಿ ಚೈತ್ರಾ ಮುಂದಿನ ವಾರ ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ ಅದಕ್ಕೆ ಮೊದಲೇ ಅವರು ಮಕ್ಕಳ ಸಹಿತ ಮೃತಪಟ್ಟಿದ್ದಾರೆ.
ಮಂಜುನಾಥನ ದರ್ಶನ ಮಾಡಿ ಕೇಲವ 3-4 ಗಂಟೆಯಾಗಿತ್ತು. ಒಂದೆರೆಡು ಕಿಲೋ ಮೀಟರ್ ಹೋಗಿದ್ದರೆ ನೆಮ್ಮದಿಯಾಗಿ ಮನೆಯನ್ನು ತಲುಪುತ್ತಿದ್ದರು. ಆದರೆ ಜವರಾಯ ಹಾಲಿನ ಟ್ಯಾಂಕರ್ ಸಾಗುವ ದಿಕ್ಕಿನಲ್ಲಿ ಸಾಗದೇ, ವಿರುದ್ದ ದಿಕ್ಕಿನಲ್ಲಿ ಬಂದಿದ್ದರಿಂದ ಒಂಬತ್ತು ಜೀವಗಳನ್ನು ಸ್ಥಳದಲ್ಲಿಯೇ ಬಲಿ ತೆಗೆದುಕೊಂಡಿದೆ. ಇಂತಹುದೊಂದು ಘಟನೆ ಅರಸೀಕರೆಯ ಬಾಣಾವಾರದಲ್ಲಿ ನಡೆದಿದೆ. ಅಪಘಾತದ ಬಳಿಕ ತಲೆಮರೆಸಿಕೊಂಡಿದ್ದ ಟ್ಯಾಂಕರ್ ಚಾಲಕ ನವೀನ್ ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.