ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತ ಟೆಕ್ಕಿ (ಇಂಜಿನಿಯರ್) ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಇಂದಿರನಗರದ ನಿವಾಸಿ ಪ್ರಮೋದ್(35) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಪ್ರಮೋದ್ ಹಾಗೂ ಅವರ ಪತ್ನಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಪತ್ನಿಯ ಸಹೋದರರು ಕೂಡ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಡಿ.29ರಂದು ಟೆಕ್ಕಿ ಪ್ರಮೋದ್ ಕಾಣೆಯಾಗಿದ್ದು, ಪೊಲೀಸರಿಗೆ ನಾಪತ್ತೆ ದೂರು ಸಹ ನೀಡಲಾಗಿತ್ತು. ಅಂದು ರಾತ್ರಿಯೇ ಹೇಮಾವತಿ ನದಿ ಸೇತುವ ತೀರ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ಮಾರನೇ ದಿನ ಸ್ಥಳೀಯರು ಬೈಕ್ ನೋಡಿ ಅಲ್ಲಿದ್ದ ಪಾಸ್‌ಬುಕ್‌ನಲ್ಲಿದ್ದ ಫೋನ್ ನಂಬರ್‌ಗೆ ಕರೆ ಮಾಡಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.
ಬಳಿಕ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿ ಬುಧವಾರ ಬೆಳಿಗ್ಗೆ ನದಿಯಲ್ಲಿ ಪ್ರಮೋದ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





