Mysore
28
broken clouds

Social Media

ಬುಧವಾರ, 29 ಏಪ್ರಿಲ 2026
Light
Dark

ಹಾಸನ: ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಸಾವು

ಹಾಸನ: ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಎನ್‌.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಭಾಕರ್(‌45), ಪ್ರತೀಕ್‌(12) ಮೃತ ದುರ್ದೈವಿಗಳು. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರತೀಕ್‌ ಮಾವನ ಮನೆಗೆ ಬಂದಿದ್ದ. ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುವಾಗ ಪ್ರತೀಕ್‌ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಪ್ರತೀಕ್‌ನನ್ನು ರಕ್ಷಿಸಲು ಮಾವ ಪ್ರಭಾಕರ್‌ ಕೂಡ ಕೆರೆಗೆ ಇಳಿದಿದ್ದಾನೆ. ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Tags:
error: Content is protected !!