Mysore
20
overcast clouds
Light
Dark

ಹಾಸನದಲ್ಲೂ ಡೆಂಗ್ಯೂ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಜಾಗೃತಿ

ಹಾಸನ : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜನರು ನಲುಗಿ ಹೋಗುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಒಂದಲ್ಲಒಂದು ಡೆಂಗ್ಯೂ ಕೇಸ್‌ ಗಳು ದಾಖಲಾಗುತ್ತಿವೆ. ಹಾಸನದಲ್ಲೂ ಕೂಡ ಡೆಂಗ್ಯೂ ಕೇಸ್‌ ಗಳು ಹೆಚ್ಚಳವಾಗಿದ್ದು. ೧೮೫ ಪಾಸಿಟಿವ್‌ ಕೇಸ್‌ ದಾಖಲಾಗಿದ್ರೆ ೪೫೦೦ ಶಂಕಿತ ಕೇಸ್‌ ಗಳು ಕಂಡುಬಂದಿದೆ.

ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೂಡ ಅಗತ್ಯ ಜಾಗೃತಿ ಮೂಡಿಸುತ್ತಿದೆ. ರೋಗಿಗಳ ಚಿಕಿತ್ಸೆಗಾಗಿ ಅಗತ್ಯವಾದ ಔಷಧಿಗಳನ್ನ ಸಂಗ್ರಹಿಸಲಾಗಿದ್ದು, ಏಳು ತಾಲೂಕು ಆಸ್ಪತ್ರೆಯಲ್ಲಿ  ತಲಾ ೧೦೦ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ಡೆಂಗ್ಯೂಗಾಗಿ ೧೨೦೦ ಬೆಡ್‌ ಗಳ ಪ್ರತ್ಯೇಕ ವಾರ್ಡ್‌ ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿದೆ. ಅಲ್ಲದೆ ಆತಂಕಕ್ಕೆ ಒಳಗಾಗದೆ ಎಚ್ಚರವಹಿಸಲು  ವೈದ್ಯರು ಮನವಿ ಮಾಡಿದ್ದಾರೆ.