ಹಾಸನ: ಇಡೀ ದೇಶವೇ ಅಲ್ಲೋಲ, ಕಲ್ಲೋಲ ಆಗುವ ಸುದ್ದಿ ಕೊಡುತ್ತೇನೆ ಎಂಬ ಮಾತನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುನರುಚ್ಛರಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾತನಾಡಿದ ಅವರು, ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ. ಅಮೇರಿಕಾಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಖಾಲಿ ಪೆನ್ಡ್ರೈವ್ ತೋರಿಸಿಕೊಂಡು ಸುತ್ತಾಡುತ್ತಿಲ್ಲ. ಹಾಗೆಯೇ ಚುನಾವಣೆಯ ವೇಳೆ ಒಂದು ಲಕ್ಷ ಪೆನ್ಡ್ರೈವ್ ಹಂಚಿದ್ದಾರಲ್ವಾ, ನಾನು ಆ ರೀತಿ ಮಾಡಲು ಹೋಗುವುದಿಲ್ಲ. ಸಮಯ ಸಂದರ್ಭ ನೋಡಿ, ಕಾಂಗ್ರೆಸ್ಸಿನ ಅಕ್ರಮ ಕೆಲಸವನ್ನು ಬಹಿರಂಗಪಡಿಸಿ ಎಂದು ನನ್ನ ಕೆಲವು ಸ್ನೇಹಿತರು ನನಗೆ ಕೊಟ್ಟಿರುತ್ತಾರೆ. ಅಲ್ಲೋಲ, ಕಲ್ಲೋಲ ಆಗುವ ವಿಷಯ ಸದ್ಯದಲ್ಲೇ ಬರಲಿದೆ ಎಂದು ಹೇಳಿದರು.




