Mysore
28
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಅರ್ಜುನ ಆನೆ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ

ಹಾಸನ : ಕಾಡಾನೆ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ್ದ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದ್ದು, ಲಕ್ಷಾಂತರ ಅಭಿಮಾನಿಗಳ ಕನಸು ನನಸಾಗುತ್ತಿದೆ.

೨೦೨೩ರ ಡಿಸೆಂಬರ್‌ ೪ ರಂದು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕನ್ನಡದ ಕಂದ ಅರ್ಜುನ ಸಾವನ್ನಪ್ಪಿದ್ದ. ಸಕಲೇಶಪುರ ತಾಲೂಕಿನ ಯಸಳೂರು ಅರಣ್ಯದ ದಬ್ಬಳ್ಳಿಕಟ್ಟೆಯ ನೆಡುತೋಪಿನ ಬಳಿ ಸಮಾಧಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇಡೀ ಕರುನಾಡೇ ಅರ್ಜುನನ ಸಾವಿಗೆ ಕಂಬನಿ ಮಿಡಿದಿತ್ತು.

ಇನ್ನು ಅರ್ಜುನ ಸಮಾಧಿ ಬಳಿ ಹೋಗಲು ಸಮರ್ಪಕವಾದ ರಸ್ತೆ ಇಲ್ಲ. ಮಳೆ ಬಂದರೆ ಸಾಕು ಅರ್ಜುನನ ಸಮಾಧಿ ಕೆಸರು ಗದ್ದೆಯಂತಾಗುತ್ತಿದೆ. ಕೂಡಲೇ ಇಲ್ಲಿ ಮೂಲ ಸೌಕರ್ಯಗಳನ್ನ ಒದಗಿಸಬೇಕು, ಅರ್ಜುನನ ಸಮಾಧಿ  ಬಳಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಅರ್ಜುನ ಆನೆ ಅಭಿಮಾನಿಗಳು ಒತ್ತಾಯ ಮಾಡಿದ್ದರು.

ಅದರಂತೆ ಇದೀಗ ಸರ್ಕಾರ ಕೂಡ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕವಾಗಿ ಲಕ್ಷಾಂತರ ಅರ್ಜುನನ ಅಭಿಮಾನಿಗಳ ಕನಸು ಈಡೇರುತ್ತಿದೆ.

ಅರ್ಜುನ ಆನೆಯನ್ನ ೧೯೬೮ ರಲ್ಲಿ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಆತನನ್ನ ಸೆರೆಯಿಡಿಯಲಾಗಿತ್ತು. ನಂತರ ಆತನನ್ನ ಪಳಗಿಸಿದ ಬಳಿಕ ೧೯೯೦ರ ದಶಕದಲ್ಲಿ ಮೈಸೂರಿನ ದಸರಾ ಉತ್ಸವದ ಸಂದರ್ಭದಲ್ಲಿ ಮೆರವಣಿಗೆಯನ್ನ ಒಳಗೊಂಡ ಶಿಬಿರಗಳಲ್ಲಿ ಬಳಸಿಕೊಳ್ಳಲಾಯಿತು. ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನ ತೆಗೆದುಕೊಂಡು  ಅಂಬಾರಿಯನ್ನ ಹೊತ್ತು ಗಜಗಾಂಭೀರ್ಯದ ಹೆಜ್ಜೆ ಹಾಕಿ ಯಶಸ್ವಿ ದಸರಾ ನಡೆಸಿಕೊಟ್ಟಿದ್ದಾನೆ.

Tags:
error: Content is protected !!