ಹನೂರು : ಪೇಪರ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೋರೆದೊಡ್ಡಿ ಗ್ರಾಮದ ಸಮೀಪ ಜರುಗಿದೆ.

ತಮಿಳುನಾಡಿನಿಂದ ಹನೂರು ಪಟ್ಟಣದತ್ತ ಬರುತ್ತಿದ್ದ ಪೇಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬೋರೆದೊಡ್ಡಿ ಸಮೀಪದ ತೀವ್ರ ತಿರುವಿನಲ್ಲಿ ಪಲ್ಟಿಯಾಗಿದೆ.ಪರಿಣಾಮ ಲಾರಿ ಪಲ್ಟಿ ಹೊಡೆದು ತೀವ್ರ ಜಖಂಗೊಂಡಿದೆ.

ತಕ್ಷಣ ದಾರಿಹೋಕರು ಹಾಗೂ ಬೋರೆದೊಡ್ಡಿ ಗ್ರಾಮಸ್ಥರು ಚಾಲಕರ ನೆರವಿಗೆ ಬಂದ ಹಿನ್ನೆಲೆ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





