Mysore
25
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಕೈ ಕೊಟ್ಟ ಸೋಲಾರ್ ಕಗ್ಗತ್ತಲಲ್ಲಿ ತೋಳಸಿಕೆರೆ ಗ್ರಾಮಸ್ಥರು

ಹನೂರು: ಕಳೆದ ಒಂದು ವಾರದಿಂದ ಸೋಲಾರ್ ಪ್ಲಾಂಟ್ ಕೆಟ್ಟಿರುರುವುದರಿಂದ ತೋಳಸಿಕೆರೆ ಗ್ರಾಮಸ್ಥರು ಕಗ್ಗತ್ತಲ್ಲಿ ಜೀವನ ಕಳೆಯುವಂತಾಗಿದೆ.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಇದ್ದರಿಂದ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅಡಿ ಡಿಡಿಜಿ ಕಾರ್ಯಕ್ರಮದಡಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ವತಿಯಿಂದ ಮುಂಬೈನ ನವ್ಯ ಟೆಕ್ನಾಲಜಿ ಸಂಸ್ಥೆಯ ಮೂಲಕ ಅಕ್ಟೋಬರ್ 31 2018 ರಂದು ಗ್ರಾಮದ 180 ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡು ಕೋಟಿ 28 ಲಕ್ಷದ 48ಸಾವಿರ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿತ್ತು.

ಕಳೆದ ಒಂದು ವಾರದಿಂದ ಸೋಲಾರ್ ಪ್ಲಾಂಟ್ ಕೆಟ್ಟಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹಾಗೂ ಕಗ್ಗತ್ತಲಿನಲ್ಲಿ ಜೀವನ ಕಳೆಯುವಂತಹ ಪರಿಸ್ಥಿತಿ ಬಂದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಯವರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಕುಮಾರ್ ಬೇಟಿ: ತೋಳಸಿಕೆರೆ ಗ್ರಾಮದಲ್ಲಿ ಸೋಲಾರ್ ಕೆಟ್ಟು ನಿಂತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಗ್ರಾಪಂ ಅಧ್ಯಕ್ಷ ಕುಮಾರ್ ಹಾಗೂ ಸದಸ್ಯ ಚಂದ್ರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.


ತೋಳಸಿಕೆರೆ ಗ್ರಾಮದಲ್ಲಿ ಸೋಲಾರ್ ದುರಸ್ತಿಯಾಗಿರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇನೆ.

ಕಿರಣ್ ಪಿಡಿಒ ಮ, ಬೆಟ್ಟ 


ತೋಳಸಿಕೆರೆ ಗ್ರಾಮದಲ್ಲಿ ಸೋಲಾರ್ ದುರಸ್ತಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಏಜೆನ್ಸಿ ರವರೆಗೆ ದುರಸ್ತಿಪಡಿಸುವಂತೆ ತಿಳಿಸಲಾಗಿದೆ.ಏಜೆನ್ಸಿಯವರು ಬಂದು ಪರಿಶೀಲನೆ ನಡೆಸಿ ಐಸಿ ಹೋಗಿರುವುದಾಗಿ ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.

ಶಂಕರ್
ಎಇಇ ಸೆಸ್ಕಾಂ ಹನೂರು ಉಪವಿಭಾಗ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!