ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಹೊರವಲಯದಲ್ಲಿರುವ ಕೊಳಕ್ಕೆ ಬಿದ್ದು ತೆರಕಣಾಂಬಿಯ
ಕಾರ್ತಿಕ್(24) ಮತ್ತು ವಿನೋದ್ (29) ನಾಯಕ ಸಮುದಾಯದ ಯುವಕರು ಮೃತಪಟ್ಟಿದ್ದಾರೆ.
ಕೊಳದ ಸಮೀಪ ಬಾರ್ ಇದ್ದು ರಾತ್ರಿ ಸಮಯದಲ್ಲಿ ಮದ್ಯಸೇವನೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇಲ್ಲ
ಮಂಗಳವಾರ ಬೆಳಿಗ್ಗೆ ಸರ್ಕಲ್ ಇನ್‌ಪೆಕ್ಟರ್ ಕಿರಣ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಸಮ್ಮುಖದಲ್ಲಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆ-ಕೊಳದ ಸಮೀಪದಲ್ಲಿ ಬಾರ್ ತೆರೆಯಲು ಪರವಾನಗಿ ನೀಡುವುದರಿಂದ ಇಂತಹ ಘಟನೆಗಳು ಸಂಭವಿಸುತ್ತದೆ. ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದರು.