ಚಾಮರಾಜನಗರ: ದೇವರ ಸ್ವರೂಪವೇ ಆಗಿರುವ ಮಹಾತ್ಮ ಗಾಂಧೀಜಿಯನ್ನು ಕೊಂದಂತಹ ನಾಥೂರಾಮ್ ಗೋಡ್ಸೆ ಹಾಗೂ ಅವರ ಸಂಸ್ಕೃತಿಯ ವೈಭವೀಕರಣ ಸಲ್ಲದು ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗ್ರಹಿಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
75ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ಕೋಳಿ ಮೊಟ್ಟೆ ಎಸೆಯುವ ಬೆಳವಣಿಗೆ ಅತ್ಯಂತ ಅಪಾಯಕಾರಿ
ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿ ಕೊಂದವರು
ಅವರನ್ನ ಪೂಜೆ ಮಾಡಬೇಡಿ ಅಂದರೆ ಅಂತವರ ಮೇಲೆ ಮೊಟ್ಟೆ ಎಸೆಯುತ್ತೀರಾ? ಹೀಗಾದರೆ ದೇಶದ ಗತಿ ಏನು? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪ್ರಬುದ್ದ ವ್ಯಕ್ತಿ, ಅವರು ಯಾವುದೇ ಪಕ್ಷದಲ್ಲಿ ಇರಲಿ ಪ್ರಜಾಪ್ರಭುತ್ವಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಗಾಂಭೀರ್ಯ ಗೌರವ ಇರುವ ವ್ಯಕ್ತಿ, ರಾಜ್ಯದಲ್ಲಿ ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದೆ, ಮೊಟ್ಟೆಯನ್ನು ಎಸೆಯುವುದು ಒಳ್ಳೆಯದಲ್ಲ, ಅತ್ಯಂತ ಅಪಾಯಕಾರಿ ಬೆಳವಣಿಗೆ ಇದು ಗೂಂಡಾ ರಾಜಕಾರಣವಾಗಿದೆ ಎಂದು ಹರಿಹಾಯ್ದರು.