ಚಾಮರಾಜನಗರ : ಸುವರ್ಣಾವತಿ,ಚಿಕ್ಕಹೊಳೆ ಜಲಾಶಯಗಳು ಭರ್ತಿಯಾಗಿ ನದಿಗೆ ನೀರು ಹರಿದುಬಿಟ್ಟಿರುವ ಪರಿಣಾಮ ಕೆರೆಕಟ್ಟೆಗಳು ಭರ್ತಿಯಾಗಿದ್ದು,ಚಾಮರಾಜನಗರ ತಾಲ್ಲೂಕಿನ ಕಣ್ಣೇಗಾಲದ ರಸ್ತೆ ಮುಳುಗಡೆಯಾಗಿದೆ. ಕಣ್ಣೇಗಾಲದಿಂದ ಆಲೂರು ಗ್ರಾಮಕ್ಕೆ ತೆರಳುವ ಮಾರ್ಗದ ಸೇತುವೆ ಮಟ್ಟ ನೀರು ಹರಿಯುತ್ತಿದೆ.
ಜಲಾಶಯದಿಂದ ನೀರು ಹರಿದು ಬಿಟ್ಟಿರುವ ಕಾರಣ ರಾತ್ರಿ ವೇಳೆ ಸಂಪೂರ್ಣ ಮುಳುಗಡೆಯಾಗುವ ಕಾರಣ ಸಾರ್ವಜನಿಕರು ಸಂಚರಿಸದಂತೆ ಸೂಚನೆ ನೀಡಲಾಗಿದೆ.
ಗ್ರಾಮದ ತೋಟಗಳು, ಗದ್ದೆಗಳಿಗೆ ಹೋಗದೆ ಹಸು,ಕುರಿಗಳನ್ನು ಜಮೀನಿಗೆ ಮೇಯಿಸಲು ಕರೆದುಕೊಂಡು ಹೋಗದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸೇತುವೆ ಮಟ್ಟ ನೀರು ಬಂದಿರುವುದರಿಂದ ಗ್ರಾಮಸ್ಥರು ಸೇತುವೆ ಬಳಿ ರಭಸದಿಂದ ನೀರು ಹರಿಯುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.ಗ್ರಾಮ ಪಂಚಾಯಿತಿ ಸದಸ್ಯ ಆರ್ ಮಾದೇಶ್ ಅವರ ಸಮ್ಮುಖದಲ್ಲಿ ಕಾರ್ಯದರ್ಶಿ ಶೇಖರ್ ರವರು ಮುನ್ನೆಚ್ಚರಿಕೆ ಕ್ರಮಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಕಟಿಸಲಾಯಿತು.