Mysore
14
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮುಂದುವರಿದ ಕಬ್ಬು ಬೆಳೆಗಾರರ ತಟ್ಟೆ ಲೋಟ ಚಳವಳಿ

ಮೈಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರರ ತಟ್ಟೆ ಲೋಟ ಚಳವಳಿ ಮತ್ತು ಧರಣಿ ಐದನೇ ದಿನಕ್ಕೆ ಮುಂದುವರಿದಿದೆ.

ನವೆಂಬರ್‌ ಎಂಟರಂದು ಜಿಲ್ಲಾ ಉಸ್ತುವಾರಿ ಸಚಿವರು ಕಬ್ಬು ಬೆಳೆಗಾರರ ಜತೆ ಖುದ್ದು ಚರ್ಚೆಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ಮನವಿ ಮಾಡಿದ ಹೊರತಾಗಿಯೂ ಕುರುಬೂರು ಶಾಂತಕುಮಾರ್‌ ನೇತೃತ್ವದ ರಾಜ್ಯ ಕಬ್ಬು ಬೆಳಗಾರರ ಸಂಘ ಪ್ರತಿಭಟನೆಯನ್ನು ಕೈ ಬಿಡಲು ನಿರಾಕರಿಸಿದೆ.

ಸರಕಾರ ಹಾಗೂ ಜಿಲ್ಲಾಡಳಿತ ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದ ಬೆಳೆಗಾರರು ಎಲ್ಲ ಬೇಡಿಕೆಗಳನ್ನು ಈಡೇರಿಸಿದ ನಂತರವೇ ಪ್ರತಿಭಟನೆ ವಾಪಸ್‌ ಪಡೆಯುವುದಾಗಿ ಪಟ್ಟು ಹಿಡಿದರು.

ಇವರೇ ಭಿಕ್ಷುಕರ ರೀತಿ ವರ್ತಿಸುತ್ತಿರುವುದರಿಂದ ಇವರ ವಿರುದ್ಧ ತಟ್ಟೆ ಲೋಟ ಬಡಿದುಕೊಂಡು ಇವರನ್ನು ಅಣಕಿಸುವ ಚಳುವಳಿಯ ಮೂಲಕ ಕುರುಡು ಮೂಕ ಕಿವುಡು ಬಂಡ ಸರ್ಕಾರವನ್ನು ಎಚ್ಚರಿಸಲು ಚಳುವಳಿ ನಡೆಸಲಾಯಿತು

ನಾಲ್ಕನೇ ದಿನದ ಚಳುವಳಿ ನಿರತ ರೈತರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ “”ನಾನು ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ ಸೋಮಶೇಖರ್ ಅವರ ಜೊತೆ ಮಾತನಾಡಿದ್ದು ಇದೆ 8ನೇ ತಾರೀಕು ಸಭೆ ಕರೆಯಲು ಮನವಿ ಮಾಡಿದ್ದೇನೆ. ಅಂದು ಅವರು ಬರದಿದ್ದರೆ ನಾನೇ ಸಭೆ ಮಾಡಿ ನಿಮ್ಮ ಒತ್ತಾಯಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತರುತ್ತೇನೆʼʼ ಎಂದು ತಿಳಿಸಿ ಆಹೋ ರಾತ್ರಿ ಧರಣಿಯನ್ನು ಕೈ ಬಿಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಮ್ಮೆಲ್ಲ ಒತ್ತಾಯಗಳನ್ನು ಈಡೇರಿಸಿದರೆ ಮಾತ್ರ ನಾವು ಅಹೋರಾತ್ರಿ ಧರಣಿ ಕೈ ಬಿಡುವುದಾಗಿ ತಿಳಿಸಿದರು.ಕಬ್ಬಿನ ಎಫ್ ಆರ್ ಪಿ ಬೆಲೆ ಅವೈಜ್ಞಾನಿಕವಾಗಿದ್ದು ಇದಕ್ಕೆ ಹೆಚ್ಚುವರಿಯಾಗಿ ಎಸ್ಎಪಿ ಬೆಲೆ ಸೇರಿಸಿ ಒಂದು ಟನ್‌ ಗೆ 3500 ಬೆಲೆ ನಿಗದಿಯಾಗಬೇಕು. ಈಗಾಗಲೇ ಕಾರ್ಖಾನೆಗಳು ಮುಂಗಡ ಎಂದು 2500 ನೀಡಿರುವುದು ಸರಿಯಾದ ನೀತಿಯಲ್ಲ. ಎಫ್ ಆರ್ ಪಿ 3050 ಮುಂಗಡ ನೀಡಬೇಕು. ನೈಜ ರೈತರಿಗೆ ಸಾಗುವಳಿ ಪತ್ರವನ್ನು ಕೊಡಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ ನಂಜನಗೂಡು ತಾಲೂಕು ಅಧ್ಯಕ್ಷ ಹಾಡ್ಯ ರವಿ, ಅಂಬಳೆ ಮಂಜುನಾಥ್, ಕೆರೆಹುಂಡಿ ಶಿವಣ್ಣ, ಚುಂಚರಾಯನಹುಂಡಿ ಮಂಜು, ಸಿದ್ದರಾಮ, ಮಲ್ಲಪ್ಪ, ಶಿವು, ಗಿರೀಶ್, ಕುಮಾರ್, ಕೂಶಣ್ಣ, ರಾಜಣ್ಣ, ರಾಜೇಶ್, ಮಾರ್ಬಳ್ಳಿ ನೀಲಕಂಠಪ್ಪ,ಹಿರೇನಂದಿ ಮಹದೇವಪ್ಪ ಮತ್ತಿತರರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!