Mysore
23
moderate rain

Social Media

ಬುಧವಾರ, 16 ಸೆಪ್ಟೆಂಬರ್ 2026
Light
Dark

ಆಹಾರಕ್ಕಾಗಿ ಬಸ್‌ ಅಡ್ಡಗಟ್ಟಿದ ಕಾಡಾನೆ!

ಚಾಮರಾಜನಗರ: ನಡುರಸ್ತೆಯಲ್ಲಿ ನಿಂತಿದ್ದ ಆನೆಯೊಂದು ಎದುರಿಗೆ ಬಂದ ಬಸ್ ಕಿಟಕಿಗೆ ಸೊಂಡಿಲು ತೂರಿ ಆಹಾರ ಅರಸಿದ ಘಟನೆ ತಮಿಳುನಾಡಿನ ದಿಂಬಂ ಘಟ್ಟ ಪ್ರದೇಶದಲ್ಲಿ ನಡೆದಿದೆ. ಚಾಮರಾಜನಗರದಿಂದ ಸತ್ಯಮಂಗಲಂಗೆ ತೆರಳುತ್ತಿದ್ದ ಬಸ್ ಇದಾಗಿದ್ದು,

ಆನೆ ಬರುತ್ತಿದ್ದಂತೆ ಚಾಲಕ ಸೀಟ್ ಬಿಟ್ಟು ಹಿಂದೆ ಸರಿದಿದ್ದಾರೆ. ಆನೆ ಸೊಂಡಿಲು ಒಳ ಹಾಕುತ್ತಿದ್ದಂತೆ ಪ್ರಯಾಣಿಕರು ಗಾಬರಿಗೊಂಡು ಕಿರುಚಾಡಿದ್ದಾರೆ. ಬಳಿಕ ಆನೆ ಬಸ್​ನಿಂದ ಹಿಂದೆ ಸರಿಯಿತು. ನಡುರಸ್ತೆಯಲ್ಲಿ ಕಾಡಾನೆ ಆರ್ಭಟಕ್ಕೆ ಒಂದು ತಾಸಿಗೂ ಹೆಚ್ಚುಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!