Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಗುಂಡಾಲ್ ಜಲಾಶಯ ಭರ್ತಿ : ಬಾಗಿನ ಅರ್ಪಿಸಿದ ಶಾಸಕ ಆರ್. ನರೇಂದ್ರ

ಹನೂರು: ಗುಂಡಾಲ್ ಜಲಾಶಯ ನಿರ್ಮಾಣ ಮಾಡಿ 35 ವರ್ಷಗಳು ಕಳೆದಿದೆ,ಆದರೆ ಆಗಸ್ಟ್ ನಲ್ಲಿ ಇದೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿರುವುದು ಸಂತೋಷ ತಂದಿದೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಗುಂಡಾಲ್ ಜಲಾಶಯದಲ್ಲಿ ಶೇಖರಣೆಯಾಗುವ ನೀರಿನಲ್ಲಿ 17.5ಸಾವಿರ ಎಕರೆಗೆ ಕೃಷಿಗೆ ಬಳಸಬಹುದಾಗಿದೆ ಆದರೆ ನಿರ್ವಹಣೆ ಕೊರತೆಯಿಂದ ಕೇವಲ 3 ಸಾವಿರ ಎಕರೆಗಷ್ಟೇ ಜಲಾಶಯದ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.ಕಳೆದ 2 ವರ್ಷಗಳು ಕರೋನಾ ಇದ್ಧ ಹಿನ್ನೆಲೆ ಸರ್ಕಾರ ಜಲಾಶಯದ ಅಭಿವದ್ಧಿಗೆ ಅನುದಾನ ನೀಡಲಿಲ್ಲ ಈ ಸಾಲಿನಲ್ಲಿ ನೀಡಿರುವ 20ಲಕ್ಷ ಅನುದಾನದಲ್ಲಿ ಎಡದಂಡೆ ಹಾಗೂ ಬಲದಂಡೆ ಗೇಟ್ ವಾಲ್ಅಭಿವದ್ಧಿ ಪಡಿಸಲಾಗಿದೆ. ಇರುವ ನಾಲೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹೋಗಲು ತೊಂದರೆಯಾಗಿದೆ ಈ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಸಚಿವರಿಗೆ ಮೂವತ್ತು ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಜಲಾಶಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು, ಈಗಾಗಲೇ ಕೆರೆ ತುಂಬಿಸುವ ಯೋಜನೆಯಲ್ಲಿ ಈ ಜಲಾಶಯಕ್ಕೆ ಕಾವೇರಿ ನೀರು ತುಂಬಿಸಲು ಕ್ರಮಕೈಗೊಳ್ಳಲಾಗಿದೆ. ಜಲಾಶಯದ ನೀರನ್ನು ಎಡದಂಡೆ ಹಾಗೂ ಬಲದಂಡೆಯ ರೈತರು ಬಳಸಿಕೊಂಡಾಗ ಮಾತ್ರ ಜಲಾಶಯ ನಿರ್ಮಾಣ ಮಾಡಿರುವುದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮದುವನಹಳ್ಳಿ ಶಿವಕುಮಾರ್ ದೊಡ್ಡಿಂದವಾಡಿ ಗ್ರಾಮಸ್ಥರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ