ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದವರಿಗೆ ಉಚಿತವಾಗಿ 10 ಕುರಿ ವಿತರಣೆ ಮಾಡಲಾಯಿತು.
ಭಕ್ತ ಕನಕದಾಸರ 535 ನೇ ಜಯಂತಿ ಅಂಗವಾಗಿ ಕೃಷ್ಣರ ಜ ಯುವ ಬಳಗದ ವತಿಯಿಂದ ಕನಕ ವೃತ್ತ (ನಂಜುಮಳಿಗೆ ವೃತ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದವರಿಗೆ ಉಚಿತವಾಗಿ ಕುರಿ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಚಾಮರಾಜನಗರದ ನಿವಾಸಿ ಮಹೇಶ್, ಕೆ ಆರ್ ನಗರದ ಜಯಕೃಷ್ಣ, ನಂಜನಗೂಡು ತಾಲೂಕು ನಿವಾಸಿ ಪರಶಿವ, ಮೈಸೂರು ತಾಲೂಕಿನ ವರ್ಕುಡು ಗ್ರಾಮದ ನಂದು, ವರುಣ ಕ್ಷೇತ್ರದ ಜಗನಹಳ್ಳಿ ಪಾಳ್ಯ ಭರತ್, ಕೊಳ್ಳೇಗಾಲ ತಾಲೂಕಿನ ನಿಂಗರಾಜು, ನರಸೀಪುರ ನಿವಾಸಿ ಪುಟ್ಟಸ್ವಾಮಿ, ಹುಣಸೂರು ನಿವಾಸಿ ಚೆನ್ನಪ್ಪ, ಬಿಳಿಕೆರೆಯ ರವಿ , ರವರಿಗೆ ಉಚಿತವಾಗಿ ಕುರಿ ವಿತರಿಸಿ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕೃಷ್ಣರಾಜ ಯುವ ಬಳಗದ ಯುವಕರು ಸರ್ಕಾರದ ಮಾದರಿಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ, ಇದೊಂದು ಸಾಹಸದ ಕೆಲಸ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಗಿ ತರಲು ಪ್ರಯತ್ನಿಸಿದ್ದಾರೆ ಎಂದರು, ಕುರಿ ಸಾಕಣೆ ಲಾಭ ತರುವ ಉದ್ಯಮವಾಗಿತ್ತು ಆದರೆ , ನಾಗರೀಕರಣದಿಂದ ಕುರಿ ಸಾಕಣೆ ನಶಿಸಿ ಹೋಗುತ್ತಿದೆ, ಕುರಿಗಳಿಗೆ ಬೇಡಿಕೆ ಇದೆ ಆದರೆ,ಸಾಕಲು ಸಿದ್ದರಿಲ್ಲ, ಕುರಿ ಸಾಕಣೆಯಿಂದ ಉದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂದು ತಿಳಿಸಿದರು
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಕನಕದಾಸರು ಯಾವುದೆ ಜಾತಿಗೆ ಸೀಮಿತವಲ್ಲ, ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಅಂದೆ ಜಾತಿ ಸಂಘರ್ಷಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು. ಭಕ್ತಿ ಪರಂಪರೆ ಕಾಲದಲ್ಲಿ ಅವರು ಎದುರಿಸಿದ ಸಂಕಷ್ಟಕ್ಕೆ ಬದಲಾಗಿ ತಮ್ಮ ವೈಚಾರಿಕ, ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ನೀಡಿದರು ಎಂದರು.ಭೂಮಿ ಅಗೆಯುತ್ತಿದ್ದಾಗ ಕನಕನಿಗೆ ಸಿಕ್ಕ ನಿಧಿಯನ್ನು ತಾನು ಬಳಸದೆ ಬಡವರ ಉದ್ಧಾರಕ್ಕೆ, ದೇವಸ್ಥಾನ ಜೀರ್ಣೋದ್ಧಾರ ಹೀಗೆ ಸಮಾಜಮುಖಿ ಕೆಲಸಕ್ಕೆ ನೀಡಿದರು. ಕೀರ್ತನೆ, ಕಾವ್ಯದ ಮೂಲಕ ಜನರ ಅಜ್ಞಾನ ಹೋಗಲಾಡಿಸುವ ಕೆಲಸ ಮಾಡಿದರು. ವ್ಯಾಸರಾಯರ ಶಿಷ್ಯನಾಗಿ ಅವರ ಮನಗೆದ್ದ ಹಲವು ಘಟನೆ ಇಂದಿಗೂ ಕಥೆಯಾಗಿ ಜನಪ್ರಿಯವಾಗಿವೆ. ಕನಕದಾಸರ ಜೀವನ ಎಲ್ಲರೂ ಅನುಸರಿಸುವಂತದ್ದು, ಅವರ ಜೀವನ ಓದಿ ತಿಳಿದು ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು. ತದನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಗೋಪಿ ಕನಕದಾಸರು ಸಾಹಿತ್ಯ, ಸಂಗೀತದ ಗಣಿ’ ಕನಕದಾಸರು ಕವಿಗಳು ಮಾತ್ರವಲ್ಲ, ಅವರೊಬ್ಬ ಸಾಹಿತ್ಯ ಮತ್ತು ಸಂಗೀತ ಲೋಕದ ಗಣಿ ಎಂದು ಅಭಿಪ್ರಾಯಪಟ್ಟರು.
ಅನಂತರ ಮಾತನಾಡಿದ ಕೃಷ್ಣರಾಜ ಯುವ ಬಳಗದ ಗೌರವಾಧ್ಯಕ್ಷ ಬಸವರಾಜ ಬಸಪ್ಪ ಇಂದು ಸಾಂಕೇತಿಕವಾಗಿ 10 ಹಿಂದುಳಿದ ಫಲಾನುಭವಿಗಳಿಗೆ ಉಚಿತವಾಗಿ ಕುರಿಯನ್ನು ವಿತರಣೆ ಮಾಡಿದ್ದೇವೆ ಮುಂದಿನ ದಿನಗಳಲ್ಲಿ 100 ಆರ್ಥಿಕವಾಗಿ ಹಿಂದುಳಿದ ಕುರುಬ ಸಮುದಾಯದ ಮಂದಿಗೆ ಸ್ವಯಂ ಉದ್ಯೋಗ ಸೃಷ್ಟಿಸಲು ಇಂಥ ಕಾರ್ಯಗಳು ಮುಂದುವರಿಸುತ್ತಾ ಬರುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್, ನಗರಪಾಲಿಕ ಸದಸ್ಯರಾದ ಗೋಪಿ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಉದ್ಯಮಿ ಆರ್ ಕೆ ಕಾರ್ಸ್ ಮಾಲೀಕರಾದ ರವಿ, ಕೃಷ್ಣರಾಜ ಯುವ ಬಳಗ ಅಧ್ಯಕ್ಷರಾದ ನವೀನ್ ಕೆಂಪಿ, ಮಂಜುನಾಥ್, ಜೋಗಿ ದೀಪು, ತೀರ್ಥ ಕುಮಾರ್, ಮಂಜಣ್ಣ, ಪ್ರೇಮ್ ಕುಮಾರ್, ಪುರುಷೋತ್ತಮ್, ಮಂಜುನಾಥ್, ಚಂದ್ರಶೇಖರ್, ಬಸವರಾಜು, ಹಾಗೂ ಇನ್ನಿತರರು ಹಾಜರಿದ್ದರು