Mysore
22
overcast clouds

Social Media

ಗುರುವಾರ, 09 ಏಪ್ರಿಲ 2026
Light
Dark

ಮಿಮ್ಸ್ ತುರ್ತು ಚಿಕಿತ್ಸಾ ಘಟಕದಲ್ಲಿ ಭ್ರೂಣ ಪತ್ತೆ!

ಮಂಡ್ಯ: ಮಿಮ್ಸ್‌ನ ತುರ್ತು ಚಿಕಿತ್ಸಾ ಘಟಕದ ಶೌಚಾಲಯದಲ್ಲಿ 40 ದಿನದ ಭ್ರೂಣ ಪತ್ತೆಯಾಗಿದೆ.  ಮಂಗಳವಾರ ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಮಹಿಳೆಗೆ ಗಜಪ್ರಸವ ಆಗಿದ್ದು, ಆ ಭ್ರೂಣವನ್ನು ಶೌಚಾಲಯದಲ್ಲೇ ಬಿಟ್ಟು ಹೋಗಿದ್ದಾರೆ.

ಬುಧವಾರ ಬೆಳಿಗ್ಗೆ ಶೌಚಾಲಯ ಸ್ವಚ್ಛಗೊಳಿಸಲು ಬಂದ ನೌಕರರು ಭ್ರೂಣ ಬಿದ್ದಿರುವುದನ್ನು ಕಂಡು ಹೆಗ್ಗಣ ಬಿದ್ದಿದೆ ಎಂದು ತಿಳಿದು ಬೇರೆ ನೌಕರರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದ ವೈದ್ಯರು ಹೋಗಿ ನೋಡಲಾಗಿ ಭ್ರೂಣ ಎಂದು ತಿಳಿದುಬಂತು.

ಈ ಭ್ರೂಣ ಯಾರದ್ದು ಎಂದು ಪತ್ತೆಯಾಗಿಲ್ಲ, ಆಸ್ಪತ್ರೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರೀಕ್ಷಿಸಿ ಪತ್ತೆ ಹಚ್ಚಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!