Mysore
27
overcast clouds

Social Media

ಬುಧವಾರ, 24 ಜೂನ್ 2026
Light
Dark

ಕಬಿನಿ ಡ್ಯಾಂಗೂ ಬಂತು ಚಿರತೆ: 3 ಬೋನ್ ಅಳವಡಿಸಿ ಕಾರ್ಯಾಚರಣೆ

ಚಿರತೆ ಸೆರೆಗೆ 3 ಬೋನ್ ಅಳವಡಿಸಿ ಕಾರ್ಯಾಚರಣೆ

ಮಂಜು ಕೋಟೆ

ಎಚ್.ಡಿ.ಕೋಟೆ: ತಾಲ್ಲೂಕಿನ ಪ್ರವಾಸಿಗರ ತಾಣವಾಗಿರುವ ಕಬಿನಿ ಜಲಾಶಯದಲ್ಲಿ ವಾರದಲ್ಲಿ ನಾಲ್ಕು ಬಾರಿ ಚಿರತೆ ಪ್ರತ್ಯಕ್ಷದಿಂದ ಪ್ರವಾಸಿಗರು ಮತ್ತು ನಿವಾಸಿಗಳು ಆತಂಕದಲ್ಲಿದ್ದಾರೆ.
ಕಬಿನಿ ಜಲಾಶಯದ ಪ್ರಮುಖ 4 ಕ್ರಸ್ಟ್ ಗೇಟ್‌ಗಳ ಸಮೀಪದಲ್ಲಿ ಬುಧವಾರ ರಾತ್ರಿ ಭಾರೀ ಗಾತ್ರದ ಚಿರತೆ ಜಲಾಶುಂದ ಮುಂಭಾಗದಿಂದ ನಡೆದುಕೊಂಡು ಹೋಗಿ ಗೇಟ್ ಸಮೀಪದ ಜಾಲರಿಯಿಂದ ನೀರಿನ ಮಧ್ಯದಲ್ಲಿ ರಾಜಾರೋಷವಾಗಿ ಹೋಗಿದೆ. ಈ ದೃಶ್ಯಾವಳಿಯನ್ನು ಸಮೀಪದ ಪವರ್ ವಿದ್ಯುತ್ ಘಟಕದಲ್ಲಿರುವ ಸಿಸಿ ಕ್ಯಾಮೆರಾದ ಮೂಲಕ ಸೆರೆಹಿಡಿಲಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಜಲಾಶಯದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ನಡುಕು ಉಂಟಾಗಿದೆ. ಜಲಾಶಯಕ್ಕೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುತ್ತಿರುವುದರಿಂದ ಮುಂಭಾಗದ ಬೃಂದಾವನದ ಖಾಲಿ ಜಾಗದಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಇಲ್ಲಿಂದ ಚಿರತೆ ದಾಳಿ ನಡೆಸಿದರೆ ಪರಿಸ್ಥಿತಿ ಏನಾಬಹುದು ಎಂದು ಜನರು ಆತಂಕದಲ್ಲಿದ್ದಾರೆ.


ವಾರಕ್ಕೆ ಮೂರರಿಂದ ನಾಲ್ಕು ಬಾರಿ ರಾತ್ರಿ 8 ಗಂಟೆಯಿಂದ 9 ಗಂಟೆ ಒಳಗೆ ಜಲಾಶಯದ ಮುಂಭಾಗದಲ್ಲಿ ಭಾರಿ ಗಾತ್ರದ ಚಿರತೆ ತನ್ನ ಆರ್ಭಟವನ್ನು ತೋರಿಸುತ್ತಿದೆ. ಇದರ ಸಮಗ್ರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿ ಕೆಲಸ ನಿರ್ವಹಿಸುವವರೆಗೂ ಆತಂಕ ಎದುರಾಗಿದೆ. ಆದ್ದರಿಂದ ಚಿರತೆಯನ್ನು ಬಂಧಿಸುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ.

-ಸಂದೀಪ್ ಕುಮಾರ್, ಸೀನಿಯರ್ ಮ್ಯಾನೇಜರ್‌ , ಸುಭಾಷ್ ವಿದ್ಯುತ್ ಘಟಕ


ಜಲಾಶಯ ಮುಂಭಾಗದಲ್ಲಿ ಚಿರತೆ ಪ್ರತ್ಯಕ್ಷದ ಬಗ್ಗೆ ನೀರಾವರಿ ಇಲಾಖೆಯವರು ಮತ್ತು ವಿದ್ಯುತ್ ಘಟಕದವರು ವಿಚಾರ ತಿಳಿಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಮೂರು ಬೋನ್‌ಗಳನ್ನು ಇಡಲಾಗಿದೆ. ಕಾರ್ಯಾಚರಣೆ ನಡೆಸಲಾಗುವುದು. ಯಾರೂ ಆತಂಕ ಪಡಬಾರದು.
-ಪ್ರಸನ್ನ ಕುಮಾರ್, ಅರಣ್ಯ ಅಧಿಕಾರಿ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!