ವಿಷ್ಣುವರ್ಧನ್ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಮೆರವಣಿಗೆ: ಪಾರ್ಥಸಾರಥಿ
ಮೈಸೂರು: ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ವಿಷ್ಣು ಸ್ಮಾರಕ ಒಕ್ಕೂಟದ ಸಹಯೋಗದಲ್ಲಿ ಜ.29ರಂದು ವಿಷ್ಣುವರ್ಧನ್ ಭಾವಚಿತ್ರ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಭಿಮಾನಿಗಳ ಸಂಘದ ಎಂ.ಡಿ.ಪಾರ್ಥಸಾರಥಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ಕ್ಕೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಆರಂಭವಾಗುವ ವಿಷ್ಣುವರ್ಧನ್ ಅವರ ಬೃಹತ್ ಕಟೌಟ್ ಅನ್ನು ಹೂವಿನ ಪಲ್ಲಕ್ಕಿಯಲ್ಲಿ ವಿವಿಧ ಕಲಾ ತಂಡಗಳ ಮೂಲಕ ಮೆರವಣಿಗೆ ಸಾಗಲಿದೆ. ಮಾನಂದವಾಡಿ ರಸ್ತೆಯ ಶ್ರೀರಾಂಪುರ ವೃತ್ತದವರೆಗೂ ಮೆರವಣಿಗೆ ಸಾಗಿ ಸವಾವೇಶಗೊಳ್ಳಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ವಿಷ್ಣು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಕಲಾವಿದರಾದ ಅರ್ಜುನ್ ಆರ್ಯ, ಜಮೀರ್, ನವೀನ್, ಸಂತೋಷ್, ಮಹದೇವ್ ಇನ್ನಿತರರು ಹಾಜರಿದ್ದರು.