Mysore
20
overcast clouds

Social Media

ಬುಧವಾರ, 09 ಅಕ್ಟೋಬರ್ 2024
Light
Dark

ಡಿಕೆಶಿ, ಡಿಕೆ ಸುರೇಶ್‌ ಇಬ್ಬರೂ ಗೂಂಡಾಗಳು ಎಂಬುದು ಗೊತ್ತಿದೆ: ಕೆ.ಎಸ್‌.ಈಶ್ವರಪ್ಪ

ಮೈಸೂರು: ಡಿಕೆ ಶಿವಕುಮಾರ್‌ ನೀಡಿದ್ದ ಸೆಟಲ್‌ಮೆಂಟ್‌ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಡಿಕೆ ಸುರೇಶ್‌ ಹಾಗೂ ಡಿಕೆ ಶಿವಕುಮಾರ್‌ ಇಬ್ಬರೂ ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಸಂಸದ ಡಿಕೆ ಸುರೇಶ್‌ ಇಬ್ಬರೂ ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಡಿಕೆ ಶಿವಕುಮಾರ್‌ ಸಿನಿಮಾ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಅವರ ಅರ್ಧ ಜೀವನ ತಿಹಾರ್‌ ಜೈಲಿನಲ್ಲಿ ಸೆಟಲ್‌ಮೆಂಟ್‌ ಆಗಿದೆ. ಉಳಿದ ಇನ್ನೊಂದು ಪಾರ್ಟ್‌ ಕೂಡ ಜೈಲಿನಲ್ಲೇ ಸೆಟಲ್‌ಮೆಂಟ್‌ ಆಗುತ್ತೆ. ನೋಡ್ತಾ ಇರಿ ಇಷ್ಟರಲ್ಲೇ ಡಿಕೆ ಶಿವಕುಮಾರ್‌ ಮತ್ತೆ ತಿಹಾರ್‌ ಜೈಲು ಸೇರಲಿದ್ದಾರೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಾಡಪ್ರಭು ಕೆಂಪೇಗೌಡ ಅವರು ಡಿಕೆ ಶಿವಕುಮಾರ್‌ ಅವರ ಆಸ್ತಿಯಲ್ಲ, ತಮ್ಮನ್ನು ರಾಜ್ಯ ಕಟ್ಟಿದ ವ್ಯಕ್ತಿಯ ಜತೆ ಹೋಲಿಸಿಕೊಳ್ಳುವುದು ಸರಿಯಲ್ಲ ಎಂದ ಈಶ್ವರಪ್ಪ ದೇಶ ದ್ರೋಹಿ ಹೇಳಿಕೆ ನೀಡಿದ ಡಿಕೆ ಸುರೇಶ್‌ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕ್ರಮ ಕೈಗೊಳ್ಳಿ ಎಂದರೆ ನನಗೆ ನೊಟೀಸ್‌ ಕಳುಹಿಸಿ ರಾಷ್ಟ್ರದ್ರೋಹಿಗಳನ್ನು ರಕ್ಷಣೆ ಮಾಡುತ್ತಾರೆ ಎಂದು ಕಿಡಿಕಾರಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ