Mysore
20
overcast clouds
Light
Dark

ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು: ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರಿಂದ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಪ್ರಾಥಮಿಕ ವರದಿ ನೀಡುವಂತೆ ಕುಟುಂಬ ಕಲ್ಯಾಣ ಇಲಾಖೆಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಮಾತಾ ಆಸ್ಪತ್ರೆ ಕೆಪಿಎಮ್‌ಇ ರಿಜಿಸ್ಟರ್‌ ಆಗಿಲ್ಲ. ಅಲ್ಲದೇ ಆಸ್ಪತ್ರೆ ಟ್ರೇಡ್‌ ಲೈಸೆನ್ಸ್‌ ಕೂಡ ಪಡೆದಿಲ್ಲ. ಭ್ರೂಣ ಹತ್ಯೆ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಇದರಿಂದಾಗಿ ಈ ಬಗ್ಗೆ ಯಾರಿಗೂ ತಿಳಿದು ಬಂದಿಲ್ಲ ಎಂದಿದ್ದಾರೆ.

ಜಿಲ್ಲೆಯ ಎಲ್ಲಾ ಮೆಡಿಕಲ್‌ ಸ್ಟೋರ್‌ ಮತ್ತು ಕ್ಲಿನಿಕ್‌ಗಳು ತಮ್ಮ ಟ್ರೇಡ್‌ ಲೈಸೆಂಸ್‌ ನಂಬರ್‌ಗಳನ್ನು ಡಿಸ್ ಪ್ಲೇ ಮಾಡಬೇಕು. ಇವೆರಡೂ ಇಲ್ಲದೇ ಯಾರೆಲ್ಲಾ ಅನುಮತಿ ಇಲ್ಲದೇ ಸ್ಟೃಗಳನ್ನು ನಡೆಸುತ್ತಿದ್ದಾರೆ ಅವರ ಟ್ರೇಡ್‌ ಲೈಸಂಸ್‌ಗಳನ್ನು ಕೂಡಲೇ ರದ್ದು ಮಾಡಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ