Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ʼಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿʼ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ !

ಮೈಸೂರು :  ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಉದ್ಘಾಟನೆ ನೀಡಿದರು.

ನಗರದ  ಕಾಫಿ ಸಿಟಿಯ ನೆರಳು ಬೆಳಕು ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉಸ್ಗಾಟನೆ ಮಾಡಿ ಮಾತನಾಡಿದ ಅವರು,  ಹಂಪಿಯ ಮತ್ತು ಮೈಸೂರಿನ ಸಾಂಸ್ಕೃತಿಕ ಸಂಬಂಧ ನೆನೆಯುತ್ತಾ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಹಂಪಿಯ ಸ್ಮಾರಕಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ತಲುಪಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿವೆ ಎಂದರು.

ಇದರಿಂದ ಸ್ಥಳೀಯ ಆರ್ಥಿಕ ವಹಿವಾಟಿಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಛಾಯಾಗ್ರಾಹಕರನ್ನು ಉತ್ತೇಜಿಸುವ ಮೂಲಕ ಅವರಲ್ಲಿನ ಕ್ರಿಯಾಶೀಲತೆಯನ್ನು ಪ್ರೊತ್ಸಾಹಿಸಿ ಅದರ ಲಾಭವನ್ನು ಸಮಾಜಕ್ಕೆ ಸಲ್ಲಿಸುವಲ್ಲಿ ಆಡಳಿತದ ನೆರವು ಅಗತ್ಯ. ದಸರಾವನ್ನು ಕೂಡ ಈ ನಿಟ್ಟಿನಲ್ಲಿ ಮುಂದೆ ಯೋಚಿಸಲಾಗುವುದು ಎಂದರು. 

ಶಿವಶಂಕರ್ ಬಣಗಾರ್ ಅವರು ನನ್ನ ನೆಚ್ಚಿನ ಛಾಯಾಗ್ರಾಹಕರು, ನಾನು ಅವರ ಚಿತ್ರಗಳನ್ನು ನಿರಂತರವಾಗಿ ನೋಡಿ ಆನಂದಿಸಿರುವೆ. ಕಲಾವಿದರ ಚಿತ್ರಗಳನ್ನು ಕೊಳ್ಳುವ ಮೂಲಕ ಸಮಾಜ ಪ್ರೊತ್ಸಾಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಬಣಗಾರ್ ಅವರ ಒಂದು ಚಿತ್ರವನ್ನು ಜಿಲ್ಲಾಧಿಕಾರಿ ಖರೀದಿಸಿದರು. ಬಳಿಕ ಬಣಗಾರ್ ಅವರ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಗೌರೀಶ್ ಕಪನಿ, ಜಿಕೆ ಕುಲಕರ್ಣಿ, ರಾಜಶೇಖರ ಜಮದಂಡಿ ಮತ್ತು ರಿಶಬ್ ವೆಂಚುರ್ಸ್ ಸಿಇಓ ಮಧು ಬಳ್ಳಾಕಿ ಅವರು ಉಪಸ್ಥಿತರಿದ್ದರು.

ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವು ಇಂದಿನಿಂದ ೨೯ ಫೆಬ್ರುವರಿ ೨೦೨೪ರ ಬೆಳಗ್ಗೆ ೯ ರಿಂದ ಸಂಜೆ ೯ರವರೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!