ಮೈಸೂರು: ಎಸ್.ಪ್ರಕಾಶ್ ಪ್ರಿಯಾದರ್ಶನ್ ಸ್ನೇಹಬಳಗದ ವತಿಯಿಂದ ಶನಿವಾರ 10 ಕುರಿಮರಿಗಳು ಮತ್ತು ನೀರಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
ನಗರದ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ‘ಕುರುಬರಿಂದ ಕುರುಬರಿಗಾಗಿ’ ಆಯೋಜಿಸಿದ್ದ ಕುರಿಮರಿಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಲಾಟರಿ ಎತ್ತುವ ಮೂಲಕ ಹತ್ತು ಕುರಿಮರಿ ಮತ್ತು ನೀರಿನ ಕ್ಯಾನ್‌ಗಳನ್ನು ಆಧ್ಯಾತ್ಮಿಕ ಗುರು ರಾಮಲಿಂಗು ಗುರೂಜಿ ಅವರು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಕುರಿಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳಿ, ಪ್ರತಿಯೊಬ್ಬರೂ ಸಹಾಯ ಮನೋಭಾವ ಬೆಳಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರರಿಗೆ ಸ್ಪಂದಿಸಬೇಕು, ಮಾನವೀಯತೆಯನ್ನು ಬೆಳಸಿಕೊಳ್ಳಬೇಕು. ಇದು ಶ್ಲಾಘನೀಯ ಸೇವಾ ಕಾರ್ಯ ಎಂದರು.
ಹುಣಸೂರು, ಕೆ.ಆರ್.ನಗರ, ಪಿರಿಯಾಪಟಣ್ಣ ತಾಲ್ಲೂಕಿನ ಇಬ್ಬರಿಗೆ, ತಿ.ನರಸೀಪುರ ತಾಲ್ಲೂಕಿನ ಮೂವರಿಗೆ ಮತ್ತು ವರುಣ ಕ್ಷೇತ್ರದ ಒಬ್ಬರಿಗೆ ಕುರಿಮರಿಗಳನ್ನು ವಿತರಣೆ ಮಾಡಲಾಯಿತು. ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯಾದರ್ಶನ್, ಪ್ರೊ.ಪ್ರೇಮಕುಮಾರಿ, ಮುಖಂಡರಾದ ಗಿರೀಶ್ ಗೌಡ, ಪ್ರಮೋದ್, ಅಕ್ಷಯ್, ಉಷಾ ರಮೇಶ್, ಬಾನು, ಮಹೇಂದ್ರಕಾಗಿನೆಲೆ, ಸುರೇಶ್, ಸುಂದರ್‌ರಾಜ್, ಪ್ರಕಾಶ್ ಗೌಡ, ಪುರುಷೋತ್ತಮ್, ಎಂ.ದೀಪಕ್,ಲಿಂಗರಾಜು, ಎಲ್.ಆರ್.ಪ್ರಮೋದ್, ಪವನ್ ಕುಮಾರ್ ಇತರರು ಹಾಜರಿದ್ದರು.