Light
Dark

ದಸರಾ ಗಜಪಡೆ ಅದ್ಧೂರಿ ಸ್ವಾಗತಕ್ಕೆ ಭರದ ಸಿದ್ಧತೆ

ವೀರನಹೊಸಳ್ಳಿ: ಇದುವರೆಗೆ ಯಾವುದೇ ಪ್ರಚಾರವಿಲ್ಲದೆ, ಸದ್ದಿಲ್ಲದೆ ಆಗಮಿಸುತ್ತಿದ್ದ ದಸರಾ ಗಜಪಡೆಗೆ ಈ ಬಾರಿ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಆನೆಯೊಟ್ಟಿಗೆ ಮಾವುತರ ಮಕ್ಕಳು
ಆನೆಯೊಟ್ಟಿಗೆ ಮಾವುತರ ಮಕ್ಕಳು

ಪ್ರವಾಸಿಗರು ಹಾಗೂ ವಿವಿಧ ಜಾನಪದ ಕಲಾ ತಂಡಗಳನ್ನು ಬಳಸಿಕೊಂಡು ಆಗಸ್ಟ್ ೭ರಂದು ಆರಂಭವಾಗಲಿರುವ ಗಜ ಪಯಣಕ್ಕೆ ಅರಣ್ಯ ಇಲಾಖೆ ಪೂರ್ವ ತಯಾರಿ ಜೋರಾಗಿೆಯೇ ನಡೆಯುತ್ತಿದೆ. ಪ್ರತಿ ವರ್ಷದಂತೆ ಗಜಪಯಣ ಕಾರ್ಯಕ್ರಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಳ್ಳಿಯ ಮುಖ್ಯ ದ್ವಾರದ ಮುಂಭಾಗ ಆಗಸ್ಟ್ ೭ ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಲಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ಪ್ರಚಾರವಿಲ್ಲದೆ, ಸದ್ದಿಲ್ಲದೆ ಆಗಮಿಸುತ್ತಿದ್ದ ಗಜಪಡೆಗೆ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಪ್ರವಾಸಿಗರು ಹಾಗೂ ೧೫ಕ್ಕೂ ಹೆಚ್ಚು ಜಾನಪದ ಕಲಾತಂಡಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಗಜ ಪಯಣದ ಆನೆ
ಗಜ ಪಯಣದ ಆನೆ

ಕೊರೋನ ಸಮಯದಲ್ಲಿ ಗಜ ಪಯಣವನ್ನು ಕೇವಲ ಅಧಿಕಾರಿಗಳೇ ಸೇರಿ ಮಾಡುತ್ತಿದ್ದರು. ಲ್ಲಾ ಉಸ್ತುವಾರಿ ಸಚಿವರಿಂದ ಪೂಜೆ ನೆರವೇರಿಸಿ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ, ಈ ಸಾಲಿನಿಂದ ಹೊಸ ರೂಪ ನೀಡಲಾಗುತ್ತಿದೆ. ಸುಮಾರು ೫ ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ – ಕಾಲೇಜುಗಳು, ಮಹಿಳಾ ಸಂಘಗಳಿಗೂ ಮಾಹಿತಿ ನೀಡಿ, ಗಜ ಪಯಣ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ಆನೆ ಮತ್ತು ಮಾವುತ
ಆನೆ ಮತ್ತು ಮಾವುತ

೧೫ಕ್ಕೂ ಹೆಚ್ಚು ಕಲಾ ತಂಡಗಳು: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಆಗಸ್ಟ್ ೦೭ರಂದು ಗಜಪಡೆಯ ನಾಯಕ ಅಭಿಮಾನ್ಯೂಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ. ಬಳಿಕ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಆದಿವಾಸಿಗಳ ನೃತ್ಯ, ಟಿಬೆಟ್ ನೃತ್ಯ, ಗೊರವರ ಕುಣಿತ, ಜೇನ ಕುರುಬರ ಕುಣಿತ ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚಿನ ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿದೆ. ಅಲ್ಲದೆ ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಗುತ್ತದೆ. ಪ್ರಚಾರಕ್ಕೆ ಹೆಚ್ಚು ಒತ್ತು: ಈ ಬಾರಿ ಗಜಪಯಣಕ್ಕೆ ಹೆಚ್ಚು ಪ್ರಚಾರ ನೀಡಲಾಗುತ್ತದೆ. ಪ್ರಚಾರದ ಬಗ್ಗೆ ಜಾಹೀರಾಥು ನೀಡುವುದರೊಂದಿಗೆ ಮೈಸೂರಿನ ವಿವಿಧೆಡೆ ಹಾಗೂ ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು ೨೦ ಸ್ಥಳಗಳಲ್ಲಿ ದೊಡ್ಡ -ದೊಡ್ಡ ಫಲಕಗಳನ್ನು ಪ್ರದರ್ಶಿಸಿ, ಆಗಸ್ಟ್ ೦೭ರಂದು ನಡೆಯುವ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳು ಮೊದಲ ತಂಡದಲ್ಲಿ ಆರು ಆನೆಗಳು ಆಗಮಿಸುತ್ತಿದ್ದವು. ಈ ಬಾರಿ ಮೊದಲ ಬಾರಿಗೆ ಎರಡು ಹೊಸ ಆನೆಗಳಾದ ಮಹೇಂದ್ರ ಗೋಪಿ ಸೇರಿದಂತೆ ಎಂಟು ಆನೆಗಳನ್ನು ಕರೆತರಲಾಗುತ್ತಿದೆ. ಗಜಪಡೆಯ ನಾಯಕ ಅರ್ಜುನನಿಗೆ ಜಂಬೂಸವಾರಿಯಿಂದ ನಿವೃತ್ತಿ ಹೊಂದಿದ ಕಾರಣ ವಿಶೇಷವಾಗಿ ಅಭಿನಂದಿಸಲಾಗುವುದು, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ ಮತ್ತು ಕಾವೇರಿ, ಗೋಪಾಲಸ್ವಾಮಿ ಆನೆಗಳು ಆಗಮಿಸಲಿದ್ದು, ಇದರೊಂದಿಗೆ ಹೊಸ ಆನೆಗಳಾದ ಭೀಮ ಹಾಗೂ ವರಲಕ್ಷ್ತ್ರ್ಮಿಯನ್ನು ಹೆಚ್ಚುವರಿಯಾಗಿ ಕರೆತರಲು ನಿರ್ಧರಿಸಲಾಗಿದೆ. ಸುಮಾರು ೩೦೦೦ ಜನರಿಗೆ ಭೋಜನದ ಜೊತೆಗೆ ವೀರನಹೊಸಹಳ್ಳಿ ಆಶ್ರಮ ಶಾಲೆಯಲ್ಲಿ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಗಜಪಯಣದ ಉಸ್ತುವಾರಿ ವಹಿಸಿರುವ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

 

ವಸಂತ, ಅಭಿಮನ್ಯು ಆನೆ ಮಾವುತ
ವಸಂತ, ಅಭಿಮನ್ಯು ಆನೆ ಮಾವುತ

ಅರಣ್ಯ ರಕ್ಷಕರು ಹಾಗೂ ವನಪಾಲಕರಿಗೆ ಅರಣ್ಯದ ಒಳಗಡೆ ಹೋಗಬೇಕಾದರೆ ನಾಲ್ಕು ಜನ ಸಿಬ್ಬಂದಿ ಜೊತೆಗೆ ಇರುತ್ತಾರೆ. ಬಂದೂಕು ಇರುತ್ತದೆ. ನಾವು ಅರಣ್ಯದೊಳಗೆ ಹೋಗಬೇಕಾದರೆ ಆನೆ ಅಂಕುಶ, ಮಚ್ಚು ಬಿಟ್ಟರೆ ಏನೂ ಇರುವುದಿಲ್ಲ. ಯಾವುದಾದರೂ ಕಾಡು ಪ್ರಾಣಿ ನಮ್ಮ ಮೇಲೆ ದಾಳಿ ಮಾಡಿದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಮಗೂ ಸಹ ಬಂದೂಕು ನೀಡಲಿ, ವೇತನ ತಾರತಮ್ಯ ಸರಿಪಡಿಸಲಿ. ಐದು ವರ್ಷಗಳಿಗೊಮ್ಮೆ ಮುಂಬಡ್ತಿ ಕೊಡಲಿ. ಈ ಸಾಲಿನಲ್ಲಿಯಾದರೂ ನಮ್ಮ ಬೇಡಿಕೆಗಳನ್ನು ಬಗೆಹರಿಸಲಿ. ಎಂದು ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ