ಚಾಮರಾಜನಗರ: ನಗರಸಭೆಯಿಂದ ಬಿ.ರಾಚಯ್ಯ ಜೋಡಿ ರಸ್ತೆ ಎಂಬ ಅಧಿಕೃತ ಆದೇಶವಿದ್ದರೂ ನೂತನವಾಗಿ ನಿರ್ಮಾಣವಾಗಿರುವ ಅಪೋಲೋ ಮೆಡಿಕಲ್ಸ್ ನಾಮ ಫಲಕದಲ್ಲಿ ಬಿ.ಆರ್.ಹಿಲ್ಸ್ ಎಂದು ಬರೆಯುವುದರ ಮೂಲಕ ಬಿ.ರಾಚಯ್ಯ ಅವರಿಗೆ ಅಪಮಾನವೆಸಗಿದೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ಅಪೋಲೋ ಫಾರ್ಮಸಿ ನಾಮ ಫಲಕದಲ್ಲಿ ಬಿ.ರಾಚಯ್ಯ ಜೋಡಿ ರಸ್ತೆ ಎಂದು ನಮೂದಿಸುವ ಬದಲು ಬಿ.ಆರ್.ಹಿಲ್ಸ್ ರಸ್ತೆ ಎಂದು ಬರೆದಿದ್ದು ಈ ಮೂಲಕ ದಲಿತ ರಾಜಕಾರಣಿ ಬಿ.ರಾಚಯ್ಯ ಅವರಿಗೆ ಅಪಮಾನ ಎಸಗಿದಂತಾಗಿದೆ.
ನಗರಸಭೆಯಿಂದ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಅಧಿಕೃತವಾಗಿ ಆದೇಶವಿದ್ದರೂ ಸಾಕಷ್ಟು ಮಳಿಗೆಗಳು ಬಿ.ರಾಚಯ್ಯ ಜೋಡಿ ರಸ್ತೆ ಎಂದು ಬರೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ದಲಿತ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಬಿ.ಪಿ.ಎಸ್ ಜಿಲ್ಲಾಧ್ಯಕ್ಷ ರಮೇಶ್ ಕಂದಹಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.